ಕೆಆರ್ಎಸ್ ಡ್ಯಾಂನ ಒಳ, ಹೊರ ಹರಿವು ಹೆಚ್ಚಳ
ಸದ್ಯ ಕಳೆದೆರಡು ದಿನಗಳಿಂದ ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮವಾದ ಮಳೆಯಾಗುತ್ತಿರುವ ಕಾರಣ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಒಳ ಹರಿವು ಏರಿಕೆಯಾಗುತ್ತಿದ್ದಂತೆ ಹೊರ ಹರಿವಿನ ಪ್ರಮಾಣವನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಡ್ಯಾಂ ಸಂಪೂರ್ಣ ಭರ್ತಿಯಾಗಿರುವ ಕಾರಣ ಡ್ಯಾಂನಿಂದ ನದಿಗೆ 56,624 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
124.80 ಅಡಿ ಗರಿಷ್ಟ ಸಾಮರ್ಥ್ಯವಿರುವ ಕೆಆರ್ಎಸ್ ಡ್ಯಾಂ ಸದ್ಯ 124.70 ಅಡಿಯಷ್ಟು ಭರ್ತಿಯಾಗಿದೆ.