ತಮಿಳುನಾಡಿಗೆ ನೀರು ಹರಿವಿನ ಪ್ರಮಾಣ ಹೆಚ್ಚಳ!
ರಾಜ್ಯಾದ್ಯಂತ ಹೋರಾಟದ ನಡುವೆಯೂ ತಮಿಳುನಾಡಿಗೆ ಬಿಡುತ್ತಿರುವ ನೀರಿನ ಪ್ರಮಾಣವನ್ನ ಮತ್ತಷ್ಟು ಹೆಚ್ಚಳ ಮಾಡಲಾಗಿದೆ. KRS ಡ್ಯಾಂನಿಂದ 3838 ಕ್ಯೂಸೆಕ್ ನೀರು ಬಿಡುಗಡೆ ಮಾಡಿರೋದು ಅನ್ನದಾತರ ಕೆಂಗಣ್ಣಿಗೆ ಗುರಿಯಾಗಿದೆ. ನಿನ್ನೆ 2973 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗ್ತಿತ್ತು, ಆದ್ರೆ ಇಂದು 900 ಕ್ಯೂಸೆಕ್ ನಷ್ಟು ಹೆಚ್ಚು ನೀರನ್ನ ಹರಿಸಲಾಗಿದೆ. ಅತ್ತ ಕಬಿನಿ ಡ್ಯಾಂನಿಂದಲೂ ತಮಿಳುನಾಡಿಗೆ 1600 ಕ್ಯೂಸೆನ್‌ನಷ್ಟು ನೀರು ಬಿಡುಗಡೆ ಮಾಡಲಾಗಿದೆ. ಸದ್ಯ, KRS ಡ್ಯಾಂನಲ್ಲಿ 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 96.80 ಅಡಿ ನೀರು ಸಂಗ್ರಹವಾಗಿದೆ. ಸದ್ಯ ಇಂದು ಡ್ಯಾಂನಿಂದ 6874 ಕ್ಯೂಸೆಕ್ ನೀರು ಹೊರಹರಿವಾಗಿದೆ.