ನಗರದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ

ಭಾನುವಾರ, 15 ಮೇ 2022 (18:51 IST)
ಅಕಾಲಿಕಾ ಮಳೆಯಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವರ್ಷದ ಜನವರಿಯಿಂದ ಮೇ ತಿಂಗಳವರೆಗೆ 330 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನವೇ ಡೆಂಗ್ಯೂ ಜ್ವರವು ಬಾಧಿಸುತ್ತಿದ್ದು, ಆತಂಕ ಮೂಡಿಸಿದೆ.
 
ಈ ವರ್ಷ ಬೆಂಗಳೂರಿನಲ್ಲಿ ಜನವರಿಯಿಂದ ಮೇ ತಿಂಗಳವರೆಗೆ 330 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 144 ಪ್ರಕರಣಗಳಷ್ಟೇ ವರದಿಯಾಗಿದ್ದವು.
 
ಡೆಂಗ್ಯೂ ಜ್ವರ ಎಲ್ಲಿಂದ , ಹೇಗೆ ಹರಡುತ್ತೆ ..?
 
ಸಾಮಾನ್ಯವಾಗಿ ಡೆಂಗ್ಯೂ ಜ್ವರ ಸೊಳ್ಳೆಗಳಿಂದ ಬರುತ್ತೆ. ಹೌದು, ಹಗಲಿನ ಸಮಯದಲ್ಲಿ ಸೊಳ್ಳೆ ಕಡಿತದ ಮೂಲಕ ಡೆಂಗ್ಯೂ ಹರಡಲಾಗುತ್ತದೆ.
 
ಡೆಂಗ್ಯೂ ಜ್ವರದ ಲಕ್ಷಣವೇನು ?
 
ಆರೋಗ್ಯ ತಜ್ಞರ ಪ್ರಕಾರ, ಡೆಂಗ್ಯೂನ ಆರಂಭಿಕ ಲಕ್ಷಣಗಳು ಜ್ವರದಂತೆಯೇ ಇರುತ್ತವೆ, ಹಾಗಾಗಿ ಜನರು ಅದನ್ನ ಬಹುಬೇಗ ಗುರುತಿಸುವುದಿಲ್ಲ. ಸಾಮಾನ್ಯವಾಗಿ ಸೋಂಕಿತ ಸೊಳ್ಳೆ ಕಚ್ಚಿದ ನಾಲ್ಕರಿಂದ 10 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಂಗ್ಯೂ ಹೆಚ್ಚಿನ ಜ್ವರವನ್ನ ಹೊಂದಿದೆ, ಕಾಲಾನಂತರದಲ್ಲಿ ಅದರ ಲಕ್ಷಣಗಳು ಕ್ರಮೇಣ ಹೆಚ್ಚಾಗುತ್ತವೆ.
 
ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂದೆ ನೋವು, ತೀವ್ರವಾದ ಕೀಲು ಮತ್ತು ಸ್ನಾಯು ನೋವು, ಆಯಾಸ, ವಾಕರಿಕೆ, ವಾಂತಿ, ಚರ್ಮದ ದದ್ದು ಮತ್ತು ಹಸಿವಿನ ಕೊರತೆಯಂತಹ ರೋಗಲಕ್ಷಣಗಳೊಂದಿಗೆ ಡೆಂಗ್ಯೂ ಪ್ರಾರಂಭವಾಗುತ್ತದೆ. ಹಲವಾರು ದಿನಗಳ ನಂತ್ರ, ಸಾಮಾನ್ಯವಾಗಿ 3-7 ದಿನಗಳ ನಂತ್ರ, ರೋಗಿಯು ತೀವ್ರವಾದ ಡೆಂಗ್ಯೂ ರೋಗಲಕ್ಷಣಗಳನ್ನ ಅಭಿವೃದ್ಧಿಪಡಿಸಬಹುದು.
 
ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಹೇಗೆ ..?
 
ಡೆಂಗ್ಯೂ ಜ್ವರಕ್ಕೆ ಇನ್ನೂ ಚಿಕಿತ್ಸೆ ಇಲ್ಲ, ರೋಗಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಅದ್ರಂತೆ, ಜೀವನಶೈಲಿ ತರಬೇತುದಾರ ಲ್ಯೂಕ್ ಕೌಟಿನ್ಹೋ ಅವ್ರು ಡೆಂಗ್ಯೂ ಜ್ವರವನ್ನ ತೊಡೆದು ಹಾಕಲು ಅನುಸರಿಸಬಹುದಾದ ಕೆಲವು ಸುಲಭವಾದ ಮನೆಮದ್ದುಗಳನ್ನ ತಿಳಿಸಿದ್ದಾರೆ.
 
ಡೆಂಗ್ಯೂ ಜ್ವರ ಕಾಣಿಸಿಕೊಂಡಾಗ ಎದುರಾಗುವ ಮೊದಲ ಸಮಸ್ಯೆ ಅಂದ್ರೆ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗುವುದು. ಇದನ್ನು ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಮಾರಕವಾಗುತ್ತೆ. ಈ ಕಾರಣಕ್ಕಾಗಿಯೇ ಡೆಂಗ್ಯೂ ರೋಗಿಗಳು ತಮ್ಮ ಪ್ಲೇಟ್‌ಲೆಟ್‌ಗಳನ್ನ ಹೆಚ್ಚಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನ ತೆಗೆದುಕೊಳ್ಳಬೇಕು.
 
ಡೆಂಗ್ಯೂ ಜ್ವರಕ್ಕೆ ಮನೆಮದ್ದು ..!
 
ಪಪ್ಪಾಯಿ ಎಲೆಯ ರಸ : ಪಪ್ಪಾಯಿ ಎಲೆಯ ರಸವು ಪ್ಲೇಟ್ಲೆಟ್ಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ನೀವು ಫಾರ್ಮಾ ದರ್ಜೆಯ ಮಾತ್ರೆಗಳನ್ನ ಸಹ ತೆಗೆದುಕೊಳ್ಳಬಹುದು. ಆದ್ರೆ, ತಾಜಾ ಎಲೆಗಳು ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ಜ್ಯೂಸ್ ಮಾಡಲು, ಕೆಲವು ಎಲೆಗಳ ರಸ ಸೇವಿಸ್ಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ