ಕೋವಿಡ್, ಡೆಲ್ಟಾ ನಡುವೆ ರಾಜ್ಯದಲ್ಲಿ ಹೆಚ್ಚಿದ ಡೆಂಘೀ ಕೇಸ್
ಶುಕ್ರವಾರ, 10 ಸೆಪ್ಟಂಬರ್ 2021 (12:54 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕದ ನಡುವೆ ಕಾಯಿಲೆಗಳು ಉಲ್ಬಣಗೊಳ್ಳುತ್ತಿದ್ದು, ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಒಂದೆಡೆ ಕೋವಿಡ್, ಡೆಲ್ಟಾ, ಡೆಲ್ಟಾ ಪ್ಲಸ್ ಅಟ್ಟಹಾಸದ ನಡುವೆ ನಿಫಾ ಆತಂಕ ಕೂಡ ಆರಂಭವಾಗಿದೆ. ಈ ನಡುವೆ ಡೆಂಘೀ ಕೇಸ್ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ 893 ಡೆಂಘೀ ಪ್ರಕರಣಗಳು ದಾಖಲಾಗಿವೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ 446 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗದಲ್ಲಿ 202, ಉಡುಪಿಯಲ್ಲಿ 293, ಕಲಬುರ್ಗಿಯಲ್ಲಿ 280, ದಕ್ಷಿಣ ಕನ್ನಡ 178, ಕೊಪ್ಪಳ 150, ದಾವಣಗೆರೆ 120, ದಕ್ಷಿಣ ಕನ್ನಡ 178, ಕೊಪ್ಪಳ 150, ದಾವಣಗೆರೆ 120, ಬಳ್ಳಾರಿ 113, ಹಾವೇರಿಯಲ್ಲಿ 100 ಡೆಂಘೀ ಕೇಸ್ ಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 2,736ಕ್ಕೆ ಏರಿಕೆಯಾಗಿದೆ.