ಬೆಂಗಳೂರಿನಲ್ಲಿ ಡೆಲ್ಟಾ ವೈರಸ್ ಅಟ್ಟಹಾಸ

ಬುಧವಾರ, 8 ಸೆಪ್ಟಂಬರ್ 2021 (13:36 IST)
ಬೆಂಗಳೂರು : ಕೊರೊನಾ ಮೂರನೇ ಅಲೆ ಆತಂಕದ ಬೆನ್ನಲ್ಲೇ ಬಿಬಿಎಂಪಿ ಬೆಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ ಒಟ್ಟು 268 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ.

268 ಜನರ ಪೈಕಿ ಇಬ್ಬರಲ್ಲಿ ಕಪ್ಪಾ ವೈರಸ್ ಹಾಗೂ 38 ಜನರಲ್ಲಿ ಡೆಲ್ಟಾ ವೈರಾಣುವಿನ ಮತ್ತೊಂದು ಪ್ರಭೇದ ದೃಢಪಟ್ಟಿದೆ. ಈ ನಡುವೆ ನಿಫಾ ವೈರಸ್ ಆತಂಕ ಕೂಡ ಎದುರಾಗಿದೆ.
ಬಿಬಿಎಂಪಿ ನಡೆಸಿದ ಮನೆ ಮನೆ ಆರೋಗ್ಯ ಸರ್ವೆಯಲ್ಲಿ 22,362 ಜನರಿಗೆ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಮೇಲ್ನೋಟಕ್ಕೆ ರಾಜಧಾನಿಯಲ್ಲಿ ಕೊರೊನಾ ಪ್ರಕರಣ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ ವಾಸ್ತವದ ಸ್ಥಿತಿ ಬೇರೆಯಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ