ಬೆಂಗಳೂರು-ಬೆಂಗಳೂರಿನಲ್ಲಿ ಸ್ನೇಕ್ ಎಮೆರ್ಜೆನ್ಸಿ ಶುರುವಾಗಿದೆ.ಬಿಸಿಲ ಬೇಗೆಗೆ ಬುಸ್ ಬುಸ್ ನಾಗಗಳ ಹಾವಳಿ ಹೆಚ್ಚಾಗಿದೆ.ಫೆಬ್ರವರಿ,ಮಾರ್ಚ್ ಬಿಸಿಲ ಧಗೆ ನಡುವೆ ಹಾವುಗಳದ್ದೇ ಟೆನ್ಷನ್ ಶುರುವಾಗಿದೆ.ಫೆಬ್ರವರಿ ಆರಂಭದಲ್ಲೇ ತೀಕ್ಷವಾಗಿ ಬಿಸಿಲು ಹೆಚ್ಚಾಗಿದೆ.ಪ್ರಾಣಿಗಳು ಸಹ ಬಿಸಿಲ ಬೇಗೆಗೆ ನಲಗುತ್ತಿವೆ ಉರಗಗಳ ಪರಿಸ್ಥಿತಿ ಹೇಳತೀರದು.
ಇನ್ನೂ ಬಿಸಿಲ ಬೇಗೆಗೆ ಹಾವುಗಳು ಬಿಲ,ಹುತ್ತಗಳಿಂದ ಹೊರಬರುತ್ತಿವೆ.ಎಲ್ಲೇಲ್ಲಿ ತಂಪು ವಾತಾವರಣ ಇರುತ್ತೋ ಅಲ್ಲಿ ಆಶ್ರಯ ಪಡೆಯುತ್ತಿವೆ.ಮನೆಯ ಬಳಿಯ ತಂಪು ಸ್ಥಳಗಳಲ್ಲಿ ಹಾವುಗಳು ಕಂಡು ಬರ್ತಿದೆ.ಈ ಎರಡು ತಿಂಗಳಲ್ಲಿ ಹಾವುಗಳು ಮೊಟ್ಟೆ ಇಟ್ಟು, ಮರಿ ಮಾಡುವ ಸಮಯ ಹೀಗಾಗಿ ಉರಗ ತಜ್ಞರು ಬಿ ಕೇರ್ ಫುಲ್ ಅಂತಿದ್ದಾರೆ.