ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಗೆ ಅಷ್ಟೇನೂ ಬೆಂಬಲ ಸಿಗದಿದ್ದರೂ, ಏಷ್ಯಾದಲ್ಲೆ ಅತಿ ದೊಡ್ಡದಾದ ಹುಬ್ಬಳ್ಳಿ ನಗರದ ಎಪಿಎಂಸಿಗೆ ಬಂದ್ ಬಿಸಿ ತಟ್ಟಿತ್ತು. ಹಮಾಲರು ಪ್ರತಿಭಟನೆಗೆ ಬೆಂಬಲ ಘೋಷಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಹೀಗಾಗಿ ಎಂಪಿಎಂಸಿಯಲ್ಲಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಎಂಪಿಎಂಸಿಯಲ್ಲಿ ನಸುಕಿನ ಜಾವ ನಾಲ್ಕು ಗಂಟೆಯಿಂದಲೇ ತರಕಾರಿ ವಹಿವಾಟು ಆರಂಭವಾಗುತ್ತಿತ್ತು. ಆದ್ರೆ ಭಾರತ ಬಂದ್ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳು, ತರಕಾರಿಗಳನ್ನ ಮಾರುಕಟ್ಟೆಗೆ ತಂದಿಲ್ಲ. ಇದರಿಂದಾಗಿ ಎಂಪಿಎಂಸಿಯಲ್ಲಿನ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ.
ಎಂಪಿಎಂಸಿಯಲ್ಲಿ ಬಿಕೋ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.