ಶಾಲೆಗಳಲ್ಲಿ ಬೈಬಲ್ ಕಡ್ಡಾಯದ ಕುರಿತು ಪಾಲಕರು ಮಾಹಿತಿ ನೀಡಿ

ಶುಕ್ರವಾರ, 29 ಏಪ್ರಿಲ್ 2022 (19:52 IST)
ಬೆಂಗಳೂರು: ಕ್ರಿಶ್ಚಿಯನ್ ಶಾಲೆಗಳಲ್ಲಿ ಹಿಂದು ಮಕ್ಕಳ ಧಾರ್ಮಿಕ ಸಂಪ್ರದಾಯ, ಆಚರಣೆಗಳಿಗೆ ನಿಷೇಧ. ಬೈಬಲ್ ಬೋಧನೆ ಕಡ್ಡಾಯದಂತಹ ಕಾನೂನುಬಾಹಿರ ಕ್ರಮಗಳು ನಡೆಯುತ್ತಿದ್ದರೆ ಈ ಕುರಿತು ಮಾಹಿತಿ ನೀಡಿ, ನಾವು ಇದರ ವಿರುದ್ಧ ಬೃಹತ್ ಅಭಿಯಾನ ರೂಪಿಸಲಿದ್ದೇವೆ ಎಂದು ಪಾಲಕರಲ್ಲಿ ಹಿಂದು ಜನಜಾಗೃತಿ ಸಮಿತಿ ಮನವಿ ಮಾಡಿದೆ.
 
ನಗರದ ಕ್ಲಾರೆನ್ಸ್ ಶಾಲೆಯಲ್ಲಿ ಎಲ್ಲ ಮಕ್ಕಳಿಗೂ ಬೈಬಲ್‌ ಬೋಧನೆ ಕಡ್ಡಾಯಗೊಳಿಸಿರುವುದು ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಹಿಂದು ಜನಜಾಗೃತಿ ಸಮಿತಿ ಇಂತಹ ಅಭಿಮಾನಕ್ಕೆ ಮುಂದಾಗಿದೆ. ಇಂತಹ ಶಾಲೆಗಳ ಮಾಹಿತಿ ನೀಡುವಂತೆ ಮನವಿ ಮಾಡಿದೆ.
 
ಯಾವುದೇ ಶಾಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಗಮನಕ್ಕೆ ಬಂದರೆ  ವಾಟ್ಸ್ ನಂಬರ್ 7204082609 ಅಥವಾ ಇ-ಮೇಲ್ bengaluru.pr@ hindujagruti.org ವಿಳಾಸಕ್ಕೆ ಮಾಹಿತಿ ಕಳುಹಿಸಬಹುದು ಹಿಂದು ಜನಜಾಗೃತಿ ಸಮಿತಿ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ