ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮತದಾನ ಮಾಡಿದ ಇನ್ಫೋಸಿಸ್ ನಾರಾಯಣ ಮೂರ್ತಿ

Sampriya

ಶುಕ್ರವಾರ, 26 ಏಪ್ರಿಲ್ 2024 (16:10 IST)
Photo Courtesy X
ಬೆಂಗಳೂರು: ಅನಾರೋಗ್ಯದ ನಡುವೆಯೂ  ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಬೆಳಗ್ಗೆನೇ ಬಂದು ಮತದಾನ ಮಾಡಿದರು. ಇವರ ಜತೆ ಪತ್ನಿ ಸುಧಾ ಮೂರ್ತು ಅವರು ಮತಚಚಲಾಯಿಸಿದರು.

ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣ ಮೂರ್ತಿ ಅವರನ್ನು ಇಂದು ಬೆಳಗ್ಗೆ ಡಿಸ್ಷಾರ್ಜ್ ಮಾಡಿಸಿ, ಮತದಾನ ಮಾಡಿಸಲಾಗಿದೆ.

ಸುಧಾ ಮೂರ್ತಿ ಮಾತನಾಡಿ,  ಜನರು, ವಿಶೇಷವಾಗಿ ಯುವಕರು ಮತ ಚಲಾಯಿಸಲು ಮತ್ತು ತಮ್ಮ ನಾಯಕರನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ಭಾಗವಹಿಸುವಂತೆ ಅವರು ಒತ್ತಾಯಿಸಿದರು.ಐದು ವರ್ಷಕ್ಕೊಮ್ಮೆ ನಡೆಯುವ ಲೋಕಸಭೆ ಚುನಾವಣೆಗೆ ಎಲ್ಲರೂ ಹಕ್ಕಕ್ಕು ಚಲಾಯಿಸಬೇಕು. ನೆಯಲ್ಲಿ ಕುಳಿತುಕೊಳ್ಳಬೇಡಿ, ಹೊರಗೆ ಬಂದು ಮತ ಚಲಾಯಿಸಿ, ನಿಮ್ಮ ನಾಯಕನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಮತದಾನ ನಂತರ ಮಾತನಾಡಿದ ನಾರಾಯಣ ಮೂರ್ತಿ ಅವರು,  ನಮ್ಮ ಸಂವಿಧಾನವು ನೀಡಿರುವ ಹಕ್ಕನ್ನು ಕಾರ್ಯಗತಗೊಳಿಸಲು, ನಾವು ಯಾವುದೇ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು, ನಮ್ಮನ್ನು ಆಳಲು ನಮಗೆ ಅವಕಾಶ ಸಿಗುತ್ತದೆ. ಹಾಗಾಗಿ ತಪ್ಪದೇ ಎಲ್ಲರೂ ಮತ ಚಲಾಯಿಸಬೇಕೆಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ