ಅಮೂಲ್‌ನಿಂದ ರಾಜ್ಯದ ರೈತರಿಗೆ ಅನ್ಯಾಯ : ಡಿಕೆಶಿ ಕಳವಳ
ನಂದಿನಿ ನಮ್ಮ ಹಾಲು, 78 ಲಕ್ಷ ರೈತರಿದ್ದಾರೆ. ಇದೀಗ ರೈತರಿಗೆ ಅನ್ಯಾಯ ಆಗುತ್ತದೆ. ಅಮೂಲ್ ಬಗ್ಗೆ ಗೌರವ ಇದೆ, ಅವರು ವ್ಯಾಪಾರ ಮಾಡಲಿ. ಆದರೆ ನಮ್ಮ ನಂದಿನಿ ಬೆಳೆಯಬೇಕು. ನಮ್ಮ ಮೇಲೆ ಯಾವುದನ್ನು ಹೇರಬೇಡಿ. ನಮ್ಮ ರಾಜ್ಯದ ರೈತರನ್ನು ಉಳಿಸಬೇಕು ಎಂದರು.ಕಾಂಗ್ರೆಸ್ ಪಕ್ಷಕ್ಕೆ ಈ ಬಗ್ಗೆ ಬದ್ಧತೆ ಇದೆ. ಯಡಿಯೂರಪ್ಪ ಬೊಮ್ಮಾಯಿ ನಮ್ಮ ರಾಜ್ಯದ ರೈತರನ್ನು ಉಳಿಸಬೇಕು. ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಧ್ವನಿ ಎತ್ತುತ್ತಿಲ್ಲ. ಮಹಾರಾಷ್ಟ್ರದಿಂದ ವಿಮೆ ಘೋಷಣೆ ಆದರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಸರ್ಕಾರವ ವಜಾ ಮಾಡಬೇಕು ಎಂದು ಒತ್ತಾಯಿಸಿದರು