40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ಗೆ ಐಎನ್‌ಎಸ್‌ಎಸಿಒಜಿ ಶಿಫಾರಸು
ಶನಿವಾರ, 4 ಡಿಸೆಂಬರ್ 2021 (21:04 IST)
40 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಸೋಂಕು ತಗುಲುವ ಅಪಾಯದಲ್ಲಿರುವವರಿಗೆ ಬೂಸ್ಟರ್ ಡೋಸ್‌ಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಸಾರ್ಸ್ ಕೋವ್-೨ ವೈರಾಣು ಸಂರಚನೆ ವಿಶ್ಲೇಷಣೆ ಒಕ್ಕೂಟದ ವಿಜ್ಷಾನಿಗಳು ಸಲಹೆ ನೀಡಿದ್ದಾರೆ.
ಭಾರತದಲ್ಲಿ ಈಗಾಗಲೇ ಎರಡು ಓಮಿಕ್ರಾನ್ ತಳಿ ಪ್ರಕರಣ ಪತ್ತೆಯಾಗಿದ್ದು, ಇದು ಬಹಳ ವೇಗವಾಗಿ ಪ್ರಸರಣವಾಗಲಿದೆ ಎಂಬ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಪರಿಣಾಮಕಾರಿಯಾಗಬಲ್ಲದು ಎಂದು ಇನ್ಸಾಕಾಗ್ ಅಭಿಪ್ರಾಯಪಟ್ಟಿದೆ.
“ಈವರೆಗೂ ಲಸಿಕೆ ಪಡೆಯದವರು ಮತ್ತು ಸೋಂಕು ತಗುಲುವ ಅಪಾಯ ಹೆಚ್ಚಿರುವವರಿಗೆ ತಕ್ಷಣ ಲಸಿಕೆ ನೀಡಲು ಆದ್ಯತೆ ನೀಡಬೇಕು. 40 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಹಾಕಿಸುವ ಬಗ್ಗೆ ಪರಿಶೀಲನೆ ನಡೆಸಬೇಕು” ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ.
ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲು ಒಮಿಕ್ರಾನ್ ತಳಿಯ ಅಸ್ತಿತ್ವವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಜೆನೋಮ್ ಪರಿಶೀಲನೆ ಬಹಳ ಮುಖ್ಯವಾಗಿದೆ. ಸಾಂಕ್ರಾಮಿಕ ಹರಡಿದೆ ಎಂದು ಗೊತ್ತಾಗಿರುವ ಪ್ರದೇಶದಿಂದ ಮತ್ತು ಪ್ರದೇಶಕ್ಕೆ ನಡೆಯುವ ಪ್ರಯಾಣದ ಮೇಲೆ ನಿಗಾ ಇರಿಸಬೇಕು ಎಂದು ಎನ್‌ಎಸ್‌ಎಸಿಒಜಿ ಸಲಹೆ ನೀಡಿದೆ.
ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಬ್ರಿಟನ್ ಈಗಾಗಲೇ ಬೂಸ್ಟರ್ ಡೋಸ್‌ಗಳನ್ನು ನೀಡಲು ಅನುಮತಿ ನೀಡಿವೆ. ಹೀಗಾಗಿ ಭಾರತದಲ್ಲಿಯೂ ಈ ಬಗ್ಗೆ ಚಿಂತನೆಗಳು ನಡೆಯುತ್ತಿವೆ.