ಮುಸ್ಲಿಂ ಸರ್ಕಾರಿ ನೌಕರರಿಗೆ ವಿಶೇಷ ಅವಕಾಶ ?

ಶುಕ್ರವಾರ, 8 ಏಪ್ರಿಲ್ 2022 (09:06 IST)
ಹೈದರಾಬಾದ್ : ರಂಜಾನ್ ತಿಂಗಳಲ್ಲಿ ಸರ್ಕಾರಿ ನೌಕರರು ಸೇರಿದಂತೆ ಶಿಕ್ಷಕರು ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ತೆರಳಲು ಆಂಧ್ರ ಪ್ರದೇಶ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ.

ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಮಾಡುವ ಸಲುವಾಗಿ ಅನುಕೂಲ ಆಗುವ ರೀತಿಯಲ್ಲಿ ಸರ್ಕಾರಿ ನೌಕರರು, ಶಿಕ್ಷಕರು, ಶಾಲಾ-ಕಾಲೇಜ್ನಲ್ಲಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಜೆ ಒಂದು ಗಂಟೆ ಮುಂಚಿತವಾಗಿ ಮನೆಗೆ ತೆರಳಲು ಅವಕಾಶ ನೀಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಮುಸ್ಲಿಮರಿಗೆ ಏಪ್ರಿಲ್ 3 ರಿಂದ ಮೇ 4ರ ವರೆಗೆ ಅನುಕೂಲ ಆಗುವಂತೆ ಒಂದು ಗಂಟೆ ಮುಂಚಿತವಾಗಿ ಮನೆಗೆ ತೆರಳಲು ಆದೇಶಿಸಲಾಗಿದೆ. 

ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ಸೂರ್ಯ ಮುಳುಗುವ ಮುಂಚೆ ಮತ್ತು ಸೂರ್ಯ ಉದಯಿಸುವ ಮುನ್ನ ಆಹಾರವನ್ನು ಸೇವಿಸುವ ಪದ್ಧತಿ ಇರುವುದರಿಂದ ಅವರ ಅನುಕೂಲಕ್ಕಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ