ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೇ ಸ್ಥಳದಲ್ಲಿ ಹೆಚ್ಚು ಮತಗಟ್ಟೆಗಳಿರುವ ಕಡೆ ಭೇಟಿ ನೀಡಿ ಮತಗಟ್ಟೆಯ ಸ್ಥಳದಲ್ಲಿರಬೇಕಿರುವ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಪರಿಶೀಲನೆ ನಡೆಸಿದ್ರು, ಎಲ್ಲಾ ಮತಗಟ್ಟೆಗಳ ಬಳಿ ವಿಕಲ ಚೇತನರಿಗೆ ಸರಿಯಾದ ಸೌಲಭ್ಯವಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನೂ ಕೆ.ಆರ್.ಪುರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಎಲ್ಲಾ ಮತಗಟ್ಟೆಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಕಾಯುವ ಕೊಠಡಿ, ಸಹಾಯ ಕೇಂದ್ರ, ಶೌಚಾಯಲ, ವಿಶೇಷವಾಗಿ ವಿಕಲಚೇತನರಿಗೆ ಕಡ್ಡಾಯವಾಗಿ ರ್ಯಾಂ ಪ್ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಮೊದಲಿಗೆ ಚಳ್ಕೆರೆಯ ಸೆ. ಪಾಲ್ ಹೈ ಸ್ಕೂಲ್ ನಲ್ಲಿ ಇದೇ ಮೊದಲಿಗೆ ಹೊಸದಾಗಿ 8 ಮತಗಟ್ಟೆಗಳು ಬರಲಿದ್ದು, ಒಂದು ಕಡೆ ರ್ಯಾಂ ಪ್ ಇದ್ದು, ಮತ್ತೊಂದೆಡೆ ರ್ಯಾಂ ಪ್ ಅವಶ್ಯಕತೆಯಿದ್ದು, ರ್ಯಾಂ ಪ್ ನಿರ್ಮಾಣ ಮಾಡಬೇಕು. ಜೊತೆಗೆ ಎಲ್ಲಾ ರೀತಿಯ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.