ಸಚಿವರ ಖಾತೆ ಹಂಚಿಕೆ; ಇಲ್ಲಿದೆ ನೋಡಿ ಮಾಹಿತಿ

ಗುರುವಾರ, 21 ಜನವರಿ 2021 (11:56 IST)
ಬೆಂಗಳೂರು : ಇಂದು 7 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದು ಈ ಹಿನ್ನಲೆಯಲ್ಲಿ ಸಂಪುಟದ ಕೆಲವು ಸಚಿವರ ಖಾತೆ ಅದಲು ಬದಲು ಮಾಡಲಾಗಿದೆ.

ಈಗಾಗಲೇ ರಾಜಭವನಕ್ಕೆ ಸಚಿವರ ಸಂಭಾವ್ಯ ಖಾತೆ ಪಟ್ಟಿ ಕಳುಹಿಸಲಾಗಿದ್ದು, ಇಂದು ಖಾತೆ ಹಂಚಿಕೆ ಮಾಡಲಾಗುವುದು ಎನ್ನಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಮೊದಲು ಗೋಪಾಲಯ್ಯ ನಿರ್ವಹಿಸುತ್ತಿದ್ದು, ಈಗ ಅದನ್ನು ಉಮೇಶ್ ಕತ್ತಿ ಅವರಿಗೆ ನೀಡಲಾಗುವುದು. ಮೀನುಗಾರಿಕಾ ಮತ್ತು ಬಂದರು, ಒಳನಾಡು ಜಲಸಾರಿಗೆ ಮೊದಲು ಕೋಟ ಶ್ರೀನಿವಾಸ ಪೂಜಾರಿ ಬಳಿ ಇದ್ದು ಇದೀಗ ಎಸ್.ಅಂಗಾರ ಅವರಿಗೆ ನೀಡಲಾಗುವುದು. ಕಾನೂನು ಮತ್ತು ಸಂಸದೀಯ ಖಾತೆ ಜೆಸಿ ಮಾಧುಸ್ವಾಮಿಯಿಂದ ಬಸವರಾಜ ಬೊಮ್ಮಾಯಿಗೆ ನೀಡಲಾಗುವುದು.

ವೈದ್ಯಕೀಯ ಶಿಕ್ಷಣ ಖಾತೆ. ಸುಧಾಕರ್ ಅವರಿಂದ ಮಾಧುಸ್ವಾಮಿಗೆ ನೀಡಲಾಗುವುದು, ಕನ್ನಡ ಸಂಸ್ಕೃತಿ ಖಾತೆ ಸಿಎಂ ಬಿಎಸ್ ವೈ ಯಿಂದ ಮಾಧುಸ್ವಾಮಿಗೆ ನೀಡಲಾಗುವುದು. ಹಜ್ ಮತ್ತು ವಕ್ಫ್ ಖಾತೆ ಪ್ರಭು ಚೌಹಾಣ್ ರಿಂದ ನಾರಾಯಣಗೌಡರಿಗೆ ನೀಡಲಾಗುವುದು. ತೋಟಗಾರಿಕೆ ನಾರಾಯಣಗೌಡರಿಂದ ಗೋಪಾಲಯ್ಯಗೆ ನೀಡಲಾಗುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ