ಮಾರ್ಚ್ 27 ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಪುನರಾರಂಭ
ಶುಕ್ರವಾರ, 11 ಮಾರ್ಚ್ 2022 (17:31 IST)
ನಿಯಮಿತ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಮಾರ್ಚ್ 27ರಿಂದ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ನಿಯಮಿತ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಮಾರ್ಚ್ 27ರಿಂದ ಪುನರಾರಂಭಗೊಳ್ಳಲಿವೆ.
ಇನ್ನು ವಿದೇಶಿ ಆಗಮನ ಮತ್ತು ನಿರ್ಗಮನಕ್ಕಾಗಿ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪರಿಣಾಮಕಾರಿಯಾದ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನಗಳನ್ನು ಅನುಸರಿಸಲಿವೆ' ಎಂದಿದೆ.
ಕೋವಿಡ್-19 ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಗಮನದಲ್ಲಿಟ್ಟುಕೊಂಡು, ಕೊರೊನಾ ವೈರಸ್ ನಿಂದಾಗಿ ಎರಡು ವರ್ಷಗಳ ವಿರಾಮದ ನಂತರ ನಿಗದಿತ ಅಂತರರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸುವ ನಿರ್ಧಾರವನ್ನು ನಾಗರಿಕ ವಿಮಾನಯಾನ ಸಚಿವಾಲಯ ತೆಗೆದುಕೊಂಡಿದೆ.
ಅಂದ್ಹಾಗೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020 ರ ಮಾರ್ಚ್ 23 ರಿಂದ ಭಾರತದಲ್ಲಿ ನಿಗದಿತ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಆದಾಗ್ಯೂ, ಜುಲೈ 2020 ರಿಂದ ಭಾರತ ಮತ್ತು ಸುಮಾರು 40 ದೇಶಗಳ ನಡುವೆ ಬಯೋ ಬಬ್ಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಪ್ರಯಾಣಿಕರ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.