ಅಂತರಾಷ್ಟ್ರೀಯ ಸಂಸ್ಥೆಗಳಾದ ರೆಕಿಟ್ಟ್, ಯುಎನ್ ವುಮೆನ್ ಒಪ್ಪಂದಕ್ಕೆ ಸಹಿ

ಶುಕ್ರವಾರ, 27 ಆಗಸ್ಟ್ 2021 (19:47 IST)
ಬೆಂಗಳೂರು: ಭಾರತದಲ್ಲಿ ಮಹಿಳೆಯರಿಗೆ ಆರೋಗ್ಯ ಹಾಗೂ ಶುಚಿತ್ವ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ “ರೆಕಿಟ್ಟ್” ಹಾಗೂ “ಯುಎನ್ ವುಮೆನ್” ಎಂಬ ಅಂತರಾಷ್ಟ್ರೀಯ ಸಂಸ್ಥೆಗಳು ಪರಸ್ಪರ ಒಪ್ಪಂದಕ್ಕೆ ನಗರದಲ್ಲಿ ಸಹಿ ಹಾಕಿವೆ. ಈ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ಮಹಿಳೆಯರಿಗಾಗಿ ಉದ್ಯೋಗ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಿವೆ. 
 
ಯುಎನ್ ವುಮೆನ್ ಸಂಸ್ಥೆಯ ಭಾರತದ ಪ್ರತಿನಿಧಿ ಸುಸಾನ್ ಫರ್ಗುಸ್ ಹಾಗೂ ರೆಕಿಟ್ಟ್ ಸಂಸ್ಥೆಯ ದಕ್ಷಿಣ ಏಷ್ಯಾದ ಹಿರಿಯ ಉಪಾಧ್ಯಕ್ಷ ಗೌರವ್ ಜೈನ್ ಎಂ.ಜಿ ರಸ್ತೆಯ ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಗೌರವ್ ಜೈನ್, ರಿಕಿಟ್ಟ್ ಸಂಸ್ಥೆಯು ಆರೋಗ್ಯ, ನೈರ್ಮಲ್ಯ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಗುರಿತಿಸಿಕೊಂಡಿದೆ. ಭಾರತದಲ್ಲಿ ಮಹಿಳಾ ಸಬಲೀಕರಣ ಕ್ರಾಂತಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಹಾಗೂ ಯುಎನ್ ವುಮೆನ್ ಸಂಸ್ಥೆಯು ಜೊತೆಗೂಡಿ ಆರೋಗ್ಯ, ನೈರ್ಮಲ್ಯ ಹಾಗೂ ಶುಚಿತ್ವ ಕ್ಷೇತ್ರದಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ಮುಂದಾಗಿದ್ದೇವೆ.  ನಗರ ಪ್ರದೇಶದಲ್ಲಿ ಮಹಿಳೆಯರು ಈಗಾಗಲೇ ಹೆಚ್ಚು ಉದ್ಯೋಗದಲ್ಲಿ ತೊಡಗಿ ಆರ್ಥಿಕ ಸ್ವಾವಲಂಬಿಯಾಗಿದ್ದಾರೆ. ಇದೀಗ ನಮ್ಮ ಗಮನ ಗ್ರಾಮೀಣ ಭಾಗದ ಮಹಿಳೆಯರನ್ನೂ ಸ್ವ-ದ್ಯೋಗಿಗಳಾಗಿ ಮಾಡುವುದಾಗಿದೆ. ನಮ್ಮ ಕಾರ್ಯಕ್ರಮಕ್ಕೆ ಹಾರ್ಪಿಕ್ ವರ್ಲ್ಡ್ ಕಾಲೇಜ್, ಡೆಟಾಲ್ ಹೈಜೀನ್ ನಂಥ ಕಂಪನಿಗಳು ನಮ್ಮ ಕೆಲಸಕ್ಕೆ ಬೆಂಬಲ ಸೂಚಿಸಿವೆ ಎಂದರು. 
 
ಯುಎನ್ ವುಮೆನ್ ಸಂಸ್ಥೆಯು ಈಗಾಗಲೇ 2 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ