ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರ (FSSAI) ಸರಳ ತಂತ್ರವನ್ನು ಅನುಸರಿಸಿದೆ ಈ ಮೂಲಕ ನಿಮ್ಮ ತರಕಾರಿಯ ತಾಜಾತನದ ಗುಣಮಟ್ಟ ಪತ್ತೆ ಹಚ್ಚಲು ವಿಡಿಯೋವೊಂದನ್ನು ಹಂಚಿಕೊಂಡಿದೆ.
ಕಲಬೆರಕೆ ಆಹಾರದ ಈ ಕಾಲದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಹಚ್ಚ ಹಸಿರಿನ ತರಕಾರಿಗಳು (green vegetables) ಕೂಡ ತಾಜಾ ಆಗಿದೆ ಎಂದು ಹೇಳಲು ಅಸಾಧ್ಯ. ಈಗಾಗಲೇ ಈ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ತರಕಾರಿಗಳ ತಾಜಾತನ ಕಾಪಾಡಲು ಅದಕ್ಕೆ ರಾಸಾಯನಿಕ ಸಿಂಪಡನೆ ಮಾಡಲಾಗುತ್ತದೆ. ಇದರಿಂದ ದೇಹದ ಆರೋಗ್ಯ ಸಮಸ್ಯೆ ಉದ್ಬವಿಸುವುದಲ್ಲದೇ ಇದು ಕ್ಯಾನ್ಸರ್ಗೂ ಕಾರಣವಾಗುತ್ತದೆ. ಇದೇ ಹಿನ್ನಲೆ ನಾವು ಸೇವಿಸುವ ಆಹಾರ ಶುದ್ದವಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.
ಪೌಷ್ಟಿಕ ಆಹಾರ ಸತ್ವವುಳ್ಳ ಈ ಹಸಿರು ತರಕಾರಿ ರಾಸಾಯನಿಕ ಮುಕ್ತ ತಾಜಾ ಎಂಬುದನ್ನು ತಿಳಿದುಕೊಳ್ಳಲು ಅನೇಕರು ಹರಸಾಹಸ ಮಾಡುವುದು ಸುಳ್ಳಲ್ಲ. ಈ ರೀತಿ ಆಹಾರ ಶುದ್ಧತೆಯನ್ನು ತಿಳಿದು ಕೊಳ್ಳುವುದು ತಪ್ಪಲ್ಲ. ಆದರೆ, ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕು ಎಂಬುದು ಅತ್ಯ ಅವಶ್ಯ. ಇದೇ ಹಿನ್ನಲೆ ಅದಕ್ಕಾಗಿಯೇ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರ (FSSAI) ಕೆಲವು ಸರಳ ತಂತ್ರವನ್ನು ಅನುಸರಿಸಿದೆ ಈ ಮೂಲಕ ನಿಮ್ಮ ತರಕಾರಿಯ ತಾಜಾತನದ ಗುಣಮಟ್ಟ ಪತ್ತೆ ಹಚ್ಚಬಹುದು. ಏನಿದು ಮ್ಯಾಲಕೈಟ್ ಗ್ರೀನ್?
ತರಕಾರಿಗಳು ಹಲವು ದಿನಗಳ ಕಾಲ ಹಚ್ಚ ಹಸಿರಿನಿಂದ ಕಾಣಿಸುವಂತೆ ಮಾಡಲು ಬಣ್ಣವನ್ನು ಬಳಕೆ ಮಾಡಲಾಗುತ್ತದೆ. ಮೀನುಗಳಿಗೆ ಆಂಟಿಪ್ರೊಟೊಜೋಲ್ ಮತ್ತು ಆಂಟಿಫಂಗಲ್ ಔಷಧಿಯಾಗಿ ಬಳಸುವ ಮ್ಯಾಲಕೈಟ್ ಗ್ರೀನ್ ಅನ್ನು ತರಕಾರಿಗಳಲ್ಲೂ ಬಳಕೆ ಮಾಡಲಾಗುತ್ತದೆ ಎಂದು ಸೈನ್ಸ್ಡೈರೆಕ್ಟ್ ಡಾಟ್ ಕಾಮ್ ತಿಳಿಸಿದೆ. ಇದು ಶಿಲೀಂಧ್ರಗಳ ದಾಳಿ, ಪ್ರೊಟೊಜೋವನ್ ಸೋಂಕುಗಳು ಮತ್ತು ವಿವಿಧ ರೀತಿಯ ಮೀನುಗಳು ಮತ್ತು ಇತರ ಜಲಚರಗಳ ಮೇಲೆ ಹೆಲ್ಮಿಂಥ್ಗಳಿಂದ ಉಂಟಾಗುವ ಇತರ ರೋಗಗಳನ್ನು ನಿಯಂತ್ರಿಸುತ್ತದೆ. ಇದನ್ನು ಹಸಿ ಮೆಣಸಿನಕಾಯಿ, ಬಟಾಣಿ ಮತ್ತು ಪಾಲಕ್ನಂತಹ ಹಸಿರು ತರಕಾರಿಗಳಲ್ಲಿ ಬಳಕೆ ಮಾಡುವುದು ಕಂಡು ಬಂದಿದೆ. ಏನು ಅಪಾಯ ?
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ಪ್ರಕಾರ, ಈ ಬಣ್ಣ ಹೆಚ್ಚು ಸಮಯ, ತಾಪಮಾನ ಮತ್ತು ಸಾಂದ್ರತೆಯೊಂದಿಗೆ ಇದ್ದರೆ ಹೆಚ್ಚು ವಿಷಕಾರಿಯಾಗುತ್ತದೆ. ಇದು ಕಾರ್ಸಿನೋಜೆನೆಸಿಸ್, ಮ್ಯುಟಜೆನೆಸಿಸ್, ಕ್ರೋಮೋಸೋಮಲ್ ಮುರಿತಗಳು, ಟೆರಾಟೋಜೆನೆಸಿಟಿ ಮತ್ತು ಉಸಿರಾಟದ ವಿಷಕಾರಿ ಅಂಶ ಉಂಟುಮಾಡುತ್ತದೆ ಎಂದು ವರದಿಯಾಗಿದೆ
ಇದೇ ಉದ್ದೇಶದಿಂದ ಎಫ್ಎಸ್ಎಸ್ಎಐ ಇತ್ತೀಚೆಗೆ ಈ ಕುರಿತು ಜಾಗೃತಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ಈ ಮೂಲಕ ಕಲಬೆರಕೆಯನ್ನು ಹೇಗೆ ಪತ್ತೆ ಮಾಡುವುದು ಎಂಬುದನ್ನು ತೋರಿಸಿದೆ. ಕಲಬೆರಕೆ ಆಹಾರ ಪತ್ತೆ ಮಾಡುವ ಸರಳ ವಿಧಾನ
ಪ್ಯಾರಾಫಿನ್ನಲ್ಲಿ ಹತ್ತಿಯನ್ನು ಸ್ವಲ್ಪ ನೆನೆಸಿ ತೆಗೆದುಕೊಳ್ಳಿ
ಆ ನೆನೆಸಿದ ಹತ್ತಿಯನ್ನು ಬೆಂಡೆಕಾಯಿಯ ಮೇಲ್ಬಾಗದ ಮೇಲೆ ಹಚ್ಚಿ
•ಹತ್ತಿಯಲ್ಲಿ ಯಾವುದೇ ಬಣ್ಣ ಬದಲಾಗದಿದ್ದರೆ, ಅದು ಕಲಬೆರಕೆ ಆಗಿರದೇ ಸಹಜ ಬಣ್ಣ ಹೊಂದಿದೆ ಎಂದರ್ಥ
•ಒಂದು ವೇಳೆ ಹತ್ತಿ ಹಸಿರು ಬಣ್ಣಕ್ಕೆ ತಿರುಗಿದರೆ ಅದು ಕಲಬೆರಕೆಯಾಗಿದೆ ಎಂದು ಅರ್ಥ
ಈ ವಿಧಾನವನ್ನು ಅನುಸರಿಸುವ ಮೂಲಕ ಶುದ್ದ ಆಹಾರ ಸೇವಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ ಎಂದು ಎಫ್ಎಸ್ಎಸ್ಎಐ ತನ್ನ ಗ್ರಾಹಕರಿಗೆ ತಿಳಿಸಿದೆ.