ಕೆಂಪಕ್ಕಿ ಸೇವನೆಯಿಂದ ಈ ಆರೋಗ್ಯ ಸಮಸ್ಯೆಗಳು ದೂರ!

ಶುಕ್ರವಾರ, 27 ಆಗಸ್ಟ್ 2021 (07:04 IST)
ದೈನಂದಿನ ಆಹಾರದಲ್ಲಿ ಅನ್ನ ಊಟ ಮಾಡದವರು ಯಾರಿದ್ದಾರೆ ಹೇಳಿ? ಅದರಲ್ಲೂ ದಕ್ಷಿಣ ಭಾರತದವರಿಗೆ ಅನ್ನ ಹಾಗೂ ಅನ್ನದಿಂದ ಮಾಡಿದ ತಿಂಡಿ ಎಂದರೆ ಬಲು ಪ್ರೀತಿ. ಆದರೆ ಹೆಚ್ಚು ಅನ್ನ ಊಟ ಮಾಡಿದರೆ ದೇಹದಲ್ಲಿ ಕೊಬ್ಬು ಉಂಟಾಗಿ ತೂಕ ಹೆಚ್ಚಾಗುತ್ತದೆ ಎಂಬುದು ಅನ್ನ ಸೇವಿಸುವವರಲ್ಲಿ ಉಂಟಾಗಿರುವ ಸಮಸ್ಯೆಯಾಗಿದೆ. ಅನ್ನದ ಬದಲಿಗೆ ಯಾವುದೇ ಇತರ ಆಹಾರವನ್ನು ಸೇವಿಸಿದರೂ ಅನ್ನ ನೀಡುವ ತೃಪ್ತಿ ಹಾಗೂ ರುಚಿಯನ್ನು ಇನ್ನಾವುದೇ ಆಹಾರ ನೀಡಲು ಸಾಧ್ಯವಿಲ್ಲ. ಅನ್ನಕ್ಕೆ ಅನ್ನವೇ ಸಾಟಿ.

ನಿಮಗೆ ಅನ್ನ ಊಟ ಮಾಡಲೇಬೇಕು ಎಂದಾದಲ್ಲಿ ಬಿಳಿ ಅನ್ನದ ಬದಲಿಗೆ ಬ್ರೌನ್ ರೈಸ್ ಅನ್ನು ನೀವು ಆಯ್ಕೆಮಾಡಬಹುದು. ಬ್ರೌನ್ ರೈಸ್ಗೆ ಕೆಂಪಕ್ಕಿ ಅನ್ನು ಕುಚ್ಚಲಕ್ಕಿ ಎಂಬ ಹೆಸರೂ ಇದೆ. ಬೇರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಹೆಚ್ಚು ಸಮಯ ತಗಲುತ್ತದೆ ಮತ್ತು ಚೆನ್ನಾಗಿ ಅಗೆದು ಸೇವಿಸಬೇಕಾಗುತ್ತದೆ. ಕುಚ್ಚಲಕ್ಕಿಯನ್ನೇ ಹೋಲುವ ಬ್ರೌನ್ ರೈಸ್ನಲ್ಲಿ ಜೀವಾಂಕುರ ಪದರ, ಹೊಟ್ಟು ಪಾರ್ಶ್ವ ಸಿಪ್ಪೆ ಹಾಗೆಯೇ ಇರುತ್ತದೆ. ಬ್ರೌನ್ ರೈಸ್ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜಗಳಿದ್ದು ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಮಧುಮೇಹದ ಅಪಾಯ ಕಡಿಮೆ:
ಬ್ರೌನ್ ರೈಸ್ ಗೈಸಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದಿಲ್ಲ. ಮೂರು ಬಾರಿ ಈ ಅಕ್ಕಿಯಿಂದ ಮಾಡಿದ ಅನ್ನ ಸೇವನೆ ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು 32% ನಷ್ಟು ಕಡಿಮೆ ಮಾಡಬಹುದಾಗಿದೆ. ಬಿಳಿ ಅನ್ನದಿಂದ ಮಧುಮೇಹದ ಅಪಾಯ ಹೆಚ್ಚು. ಬಿಳಿ ಅನ್ನದಿಂದ ಮಧುಮೇಹದ ಅಪಾಯವು 17% ವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.
ಹೃದಯದ ಆರೋಗ್ಯ ಕಾಪಾಡಲು:
ಬ್ರೌನ್ ರೈಸ್ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ಡಯೆಟರಿ ಫೈಬರ್ ಅಂಶ ಅಧಿಕವಾಗಿರು ವುದರಿಂದ ಹೃದಯ ಕಾಯಿಲೆಯಿಂದ ಮರಣ ಹೊಂದುವ ಅಪಾಯ ಕೂಡ ಕಡಿಮೆ. ಬ್ರೌನ್ ರೈಸ್ನಲ್ಲಿ ಹೆಚ್ಚು ಪ್ರಮಾಣದ ಮೆಗ್ನೇಶಿಯಂ ಇದ್ದು ಇದರಿಂದ ಪಾರ್ಶ್ವವಾಯು ಹಾಗೂ ಹೃದಯ ಕಾಯಿಲೆಗೆ ಒಳಗಾಗುವ ಅಪಾಯ ತುಂಬಾ ಕಡಿಮೆ.
ಬೊಜ್ಜು ನಿವಾರಣೆಗೆ:
ತೂಕ ಇಳಿಸುವ ಇಚ್ಛೆ ನಿಮ್ಮಲ್ಲಿ ಬಲವಾಗಿದ್ದು ಹಲವಾರು ಪ್ರಯತ್ನಗಳನ್ನು ಮಾಡಿಯೂ ವಿಫಲರಾಗಿದ್ದೀರಿ ಎಂದಾದಲ್ಲಿ ಒಮ್ಮೆ ಬ್ರೌನ್ ರೈಸ್ ಸೇವಿಸಿ ನೋಡಿ. ದೇಹದ ಬೊಜ್ಜನ್ನು ಕಡಿಮೆ ಮಾಡಲು ಬ್ರೌನ್ ರೈಸ್ ಸಹಕಾರಿಯಾಗಿದೆ.
ಸಂತಾನೋತ್ಪತ್ತಿಗೆ ಸಹಕಾರಿ:
ಬ್ರೌನ್ ರೈಸ್ನಲ್ಲಿರುವ ಮ್ಯಾಂಗನೀಸ್ ಅಂಶವು ದೇಹದಲ್ಲಿ ಕೊಬ್ಬು ಸಂಗ್ರಹಣೆಯಾಗದಂತೆ ಮಾಡುತ್ತದೆ. ಈ ಮ್ಯಾಂಗನೀಸ್ ಸಂತಾನೋತ್ಪತ್ತಿ ವ್ಯವಸ್ಥೆಗೂ ಪೂರಕವಾಗಿದೆ.
ಸುಲಭ ಜೀರ್ಣಕ್ರಿಯೆ:
ಬ್ರೌನ್ರೈಸ್ನಲ್ಲಿ ನಾರಿನಂಶವಿದ್ದು ಇದು ನಿಮ್ಮ ಜೀರ್ಣವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಜೀರ್ಣ ಉಂಟಾಗದಂತೆ ತಡೆಯುತ್ತದೆ.
ಕ್ಯಾನ್ಸರ್ಗೆ ಔಷಧ:
ಬ್ರೌನ್ ರೈಸ್ನಲ್ಲಿ ಹೇರಳವಾಗಿರುವ ನಾರಿನಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್ಗಳು ಸ್ತನ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳನ್ನು ಬುಡದಲ್ಲೇ ಚಿವುಟಿ ಹಾಕುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ