ಪೊಲೀಸ್ ಠಾಣೆಯ ಸಿಬ್ಬಂದಿ ವಿಚಾರಣೆ

geetha

ಮಂಗಳವಾರ, 9 ಜನವರಿ 2024 (14:21 IST)
ಬೆಂಗಳೂರು-ಅವಧಿ ಮೀರಿ ಬೆಳಗಿನ ಜಾವದವರೆಗೆ ಸಿನಿಮಾ ಸಕ್ಸಸ್ ಪಾರ್ಟಿ ಗೆ ಅವಕಾಶ ನೀಡಿದ ಹಿನ್ನೆಲೆ ಸುಬ್ರಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಂದು ಅಲ್ಲಿ ಏನಾಯಿತು ಎನ್ನುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ನಡೆದ ದಿನ ಮಧ್ಯರಾತ್ರಿ 12.45ಕ್ಕೆ ಜೆಟ್​ಲ್ಯಾಗ್​ಗೆ ಅವತ್ತಿನ ನೈಟ್ ರೌಂಡ್ಸ್ ಇರೋ ಎಸ್​ಐ ಮತ್ತು ಸಿಬ್ಬಂದಿ ಹೋಗಿದ್ದರು. ತಡರಾತ್ರಿ 1:10ಕ್ಕೆ ಎಸ್​ಐ ಜೆಟ್​ಲ್ಯಾಗ್ ರೆಸ್ಟೋಬಾರ್ ಕ್ಲೋಸ್ ಮಾಡಿಸಿದ್ದರು.

ಸ್ಟಾರ್​ಗಳು ಒಳಗಡೆ ಇರೋದೇಕೆ ಎಂದು ಎಸ್​ಐ ಪ್ರಶ್ನೆ ಮಾಡಿದ್ದರು. ಈ ವೇಳೆ ದರ್ಶನ್ ಜೊತೆ ಫೋಟೋಗಾಗಿ ಅಭಿಮಾನಿಗಳು ನಿಂತಿದ್ದರು. ಹೋಗಿ ಕ್ರೌಡ್ ಕ್ಲಿಯರ್ ಮಾಡಿ ದರ್ಶನ್ ಮತ್ತು ಸಹನಟರನ್ನ ಕಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಜೊತೆಗೆ ಅಂದು ರಾತ್ರಿ ನಡೆದ ಘಟನೆಗಳ ಬಗ್ಗೆ ಪೊಲೀಸ್ ಸಿಬ್ಬಂದಿ ಡೈರಿಯಲ್ಲಿ ಉಲ್ಲೇಖ ಮಾಡಿದ್ದಾರೆ . ಇತ್ತ, ಜೆಟ್​ಲ್ಯಾಗ್ ಮಾಲೀಕರಾದ ಶಶಿರೇಖಾ ಜಗದೀಶ್ ಹೇಳಿಕೆ ನೀಡಿದ್ದು, ನಟ ದರ್ಶನ್ ಸೇರಿ ಎಂಟು ಜನರ ಹೆಸರು ಉಲ್ಲೇಖಿಸಿದ್ದಾರೆ. ಹೀಗಾಗಿ, ಅವರಿಗೆ ನೋಟಿಸ್ ನೀಡಲಾಗಿದೆ. ಸದ್ಯ ನೋಟಿಸ್​ಗೆ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ, ಎರಡನೇ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ