ಮುಸ್ಲಿಂ ಮಹಿಳೆಯು ಅನ್ಯ ಕೋಮಿನ ವ್ಯಕ್ತಿಯೊಂದಿಗೆ ಸಂಚರಿಸುವುದು ಅಪರಾಧವೇ?
ಭಾನುವಾರ, 19 ಸೆಪ್ಟಂಬರ್ 2021 (20:10 IST)
ಭಾರತ ಸರ್ಕಾರವು ಸಮಾನತೆ, ಸ್ವಾತಂತ್ರ್ಯ ಹಕ್ಕು ನೀಡಿದ್ದರೂ, ಕೆಲ ಮುಸ್ಲಿಂಮರು ತಾಲಿಬಾನ್ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಮುಸ್ಲಿಂ ಮಹಿಳೆಯು ಅನ್ಯ ಕೋಮಿನ ವ್ಯಕ್ತಿಯೊಂದಿಗೆ ಸಂಚರಿಸುವುದು ಅಪರಾಧವೇ? ಮುಸ್ಲಿಂಮರು ನಮ್ಮ ಸಂವಿಧಾನದಡಿ ಬದುಕುತ್ತಾರಾ ಇಲ್ಲವೇ ತಾಲಿಬಾನ್ ಆಳ್ವಿಕೆಗೆ ಒಳಪಡುತ್ತಾರೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಕೆಲ ಪುಂಡರು, ಮುಸ್ಲಿಂ ಮಹಿಳೆಗೆ ಈ ಜಗತ್ತಲ್ಲಿ ಏನಾಗುತ್ತಿದೆ ಅಂತ ಗೊತ್ತಿಲ್ವಾ? ಅನ್ಯಕೋಮಿನವರೊಂದಿಗೆ ಹೀಗೆ ಕೂತು ಹೋಗ್ತಿದ್ದೀಯ ಅಂತ ಗದರಿಸಿ, ಬೈಕ್‌ನಿಂದ ಇಳಿಸಿ ಆಟೋದಲ್ಲಿ ಹೋಗು ಎಂದು ಕಳುಹಿಸಿದ ಪ್ರಸಂಗ ನಡೆದಿದೆ. ಆದರೆ, ಇದು ಅಫ್ಘಾನಿಸ್ತಾನದಲ್ಲಿ ನಡೆದಿಲ್ಲ. ಬದಲಾಗಿ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ!
ಇಷ್ಟು ದಿನ ಹಿಂದೂ ಸಂಘಟನೆಗಳನ್ನೇ ಟಾರ್ಗೆಟ್ ಮಾಡಿದ್ದ ಕೆಲ ಮುಸ್ಲಿಂ ಪುಂಡರು, ಇದೀಗ ಬೈಕ್ ನಲ್ಲಿ ಮುಸ್ಲಿಂ ಯುವತಿಯರಿಗೆ ಡ್ರಾಪ್ ನೋಡುವ ಹಿಂದೂ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಭಾರತ ಸಂವಿಧಾನದ ಲಾಭ ಪಡೆದು ತಾಲಿಬಾನ್ ನಂತೆ ವರ್ತಿಸುತ್ತಿದ್ದಾರೆ. ತಾಲಿಬಾನ್ ಸಂಸ್ಕೃತಿ ಪಸರಿಸುವವರು ಕಂಬಿ ಹಿಂದೆ ಹೋಗಿದ್ದು, ಇಂತವರಿಗೆ ಭಾರತ ಸಂವಿಧಾನವೇ ಉತ್ತರ ನೀಡಲಿದೆ.
ಇಬ್ಬರು ಆರೋಪಿಗಳ ಬಂಧನ:
ಸಹೋದ್ಯೋಗಿ ಯುವತಿಯನ್ನು ಮನೆಗೆ ಡ್ರಾಪ್ ಮಾಡುವ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ ಶನಿವಾರ ರಾತ್ರಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರನ್ವಯ ದೂರು ದಾಖಲಿಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ವೊಂದರ ನೌಕರರಾದ ಮಹೇಶ್ ತಮ್ಮ ಸಹೋದ್ಯೋಗಿ ಮುಸ್ಲಿಂ ಮಹಿಳೆಯೊಂದಿಗೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಅವರನ್ನು ಹಿಂಬಾಲಿಸಿದ್ದ ಗುಂಪು, ಬೈಕ್ ಅಡ್ಡಗಟ್ಟಿ ಗಲಾಟೆ ಮಾಡಿತ್ತು ಎಂದು ಪೊಲೀಸ್ ತಿಳಿಸಿದ್ದಾರೆ.
ನಾವಿಬ್ಬರು ಸಹೋದ್ಯೋಗಿಗಳು:
ನಮ್ಮ ಧರ್ಮದ ಯುವತಿಯನ್ನು ಬೈಕ್‌ನಲ್ಲಿ ಏಕೆ ಕರೆದೊಯ್ಯುತ್ತಿದ್ದಿಯಾ ಎಂದು ಗುಂಪು ಪ್ರಶ್ನಿಸಿತ್ತು. ನಾವಿಬ್ಬರು ಸಹೋದ್ಯೋಗಿಗಳು, ಹಲವು ಬಾರಿ ಬೈಕ್‌ನಲ್ಲಿ ಹೋಗುತ್ತೇವೆ ಎಂದು ಯುವತಿ ಹಾಗೂ ಯುವಕ ಹೇಳಿದ್ದರು. ಯುವತಿ ಜೊತೆಯೂ ವಾದ ಮಾಡಿದ್ದ ಆರೋಪಿಗಳು, ಕುಟುಂಬದವರ ಮೊಬೈಲ್ ನಂಬರ್ ಪಡೆದು ಅವರ ಜೊತೆಯೂ ಕೆಟ್ಟದಾಗಿ ಮಾತನಾಡಿದ್ದರು. ಯುವಕನ ಮೇಲೆಯೂ ಹಲ್ಲೆ ಮಾಡಿದ್ದರು.
ಯುವತಿಯನ್ನು ಬೈಕ್‌ನಿಂದ ಇಳಿಸಿ ಆಟೋದಲ್ಲಿ ಮನೆಗೆ ಕಳುಹಿಸಿದ್ದ ಆರೋಪಿಗಳು, ಯುವತಿ ಜೊತೆ ಇನ್ನೊಮ್ಮೆ ಬೈಕ್‌ನಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.