ಕಾಂಗ್ರೆಸ್ ಗೆ ಕೈ ಕೊಟ್ಟ ಶಾಸಕ ನಾಗೇಂದ್ರ? ಆಸ್ಪತ್ರೆಯಿಂದ ಹೋಗಿದ್ದೆಲ್ಲಿ?

ಶನಿವಾರ, 20 ಜುಲೈ 2019 (15:28 IST)
ಮೈತ್ರಿ ಸರಕಾರ ವಿಶ್ವಾಸ ಮತದ ಮೇಲೆ ಕಲಾಪದಲ್ಲಿ ಚರ್ಚೆ ನಡೆಸುತ್ತಿದ್ದರೆ ಇತ್ತ ಕಾಂಗ್ರೆಸ್ ನ ಮತ್ತೊಬ್ಬ ಶಾಸಕ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದ ಶಾಸಕ ನಾಗೇಂದ್ರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಎಲ್ಲಿಗೆ ಹೋಗಿದ್ದಾರೆ ಎಂದು ಕೈ ಪಡೆ ನಾಯಕರು ಚಿಂತೆಯಲ್ಲಿದ್ದಾರೆ. ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.  

ಶಾಸಕ ನಾಗೇಂದ್ರ ಅವರನ್ನ ಭೇಟಿ ಮಾಡಲು ಹಾಗೂ ಸಂಪರ್ಕಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ಮುಂದುವರಿಸಿದ್ದಾರೆ.

ಆದರೆ ನಾಗೇಂದ್ರ ಸಂಪರ್ಕಕ್ಕೆ ಬರುತ್ತಿಲ್ಲ. ಆ ಮೂಲಕ ದೋಸ್ತಿ ಪಕ್ಷಗಳಿಗೆ ಶಾಕ್ ನೀಡಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ