ದೋಸ್ತಿ ಸರಕಾರ ಖತಂ : ರಾಷ್ಟ್ರಪತಿ ಆಳ್ವಿಕೆ ಜಾರಿ?

ಶನಿವಾರ, 20 ಜುಲೈ 2019 (15:05 IST)
ರಾಜ್ಯದ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನದ ಹಂತಕ್ಕೆ ಬಂದಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎನ್ನಲಾಗುತ್ತಿದೆ.

ರಾಜ್ಯಪಾಲರ ಆದೇಶ ಧಿಕ್ಕರಿಸಿರುವ ಹಾಗೂ ವಿಶ್ವಾಸ ಮತ ಯಾಚನೆ ನಿಗದಿತ ಗಡುವಿನೊಳಗೆ ಮಾಡದಿರೋ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಗೊಂದಲದ ಗೂಡಾಗಿದೆ. ಈ ಕುರಿತು ರಾಜ್ಯಪಾಲರು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿದೆ. ಅದರಲ್ಲಿ ಕೇಂದ್ರ ಸರಕಾರ ರಾಷ್ಟ್ರಪತಿ ಆಳ್ವಿಕೆಗೆ ಆದೇಶ ಮಾಡುತ್ತಾ? ಅನ್ನೋ ಚರ್ಚೆ ಶುರುವಾಗಿದೆ.

ರಾಜ್ಯ ರಾಜಕೀಯ ಹೈಡ್ರಾಮಾ, ಶಾಸಕರ ರಾಜೀನಾಮೆ, ರಾಜ್ಯಪಾಲರ ಆದೇಶ ಉಲ್ಲಂಘನೆ, ಆಪರೇಷನ್ ಕಮಲ ಮೊದಲಾದ ವಿಷಯಗಳನ್ನು ಕೇಂದ್ರಕ್ಕೆ ರಾಜ್ಯಪಾಲರು ಮಾಹಿತಿ ನೀಡಿದ್ದಾರೆ.

ವಿಶ್ವಾಸ ಮತ ಯಾಚನೆ ಮಾಡದ ಸರಕಾರದ ವಿರುದ್ಧವೂ ಗಮನ ಸೆಳೆದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ