ಸತ್ಯ ಹೇಳೋದು ಅಪರಾಧನಾ?- ಅಮಾನತು ವಿರುದ್ಧ ರೋಷನ್ ಬೇಗ್ ಕಿಡಿ

ಬುಧವಾರ, 19 ಜೂನ್ 2019 (12:09 IST)
ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ತಮ್ಮನ್ನು ಅಮಾನತು ಮಾಡಿರುವ ಹಿನ್ನಲೆ ಸತ್ಯ ಹೇಳೋದು ಅಪರಾಧನಾ? ಎಂದು ಕಾಂಗ್ರೆಸ್ ನ ಮಾಜಿ ಸಚಿವ ರೋಷನ್ ಬೇಗ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.



ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ಹಿನ್ನಲೆ ಶಿವಾಜಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಏನು ಹೇಳಿದ್ದೇನೆ, ಅದು ಸತ್ಯ. ಸತ್ಯ ಹೇಳೋದು ಅಪರಾಧನಾ? ನಾನು ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ನೀಡಿಲ್ಲ. ಈಗಲೂ ನಾನು ಒಬ್ಬ ಪಕ್ಷದ ಶಿಸ್ತಿನ ಕಾರ್ಯಕರ್ತ ಎಂದು ಹೇಳಿದ್ದಾರೆ.

 

ನಮ್ಮ ದಲಿತ ನಾಯಕರು ಮುನಿಯಪ್ಪರನ್ನು ಸೋಲಿಸಿದ್ರು, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಹಿರಂಗವಾಗಿ ಪ್ರಚಾರ ಮಾಡಿದ್ದರು. ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ . ಕೆಲವರಿಗೆ ಸತ್ಯ ಹೇಳಿದರೆ ಅಪರಾಧ. ನಾನು ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಹೆಚ್.ಕೆ.ಪಾಟೀಲ್, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿ ಆಮೇಲೆ ದೆಹಲಿಗೆ ಹೋಗಬೇಕಾ ಬೇಡವಾ ಎಂದು ನಿರ್ಧರಿಸುತ್ತೇನೆ, ಎಂದು ರೋಷನ್ ಬೇಗ್ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ