ರಾಜ್ಯದಲ್ಲಿ ಮಕ್ಕಳ ಆಯೋಗ ಇದ್ಯಾ? ಅಂತಾ ಕಿಡಿಕಾರಿದ ಪೋಷಕರು

ಮಂಗಳವಾರ, 18 ಅಕ್ಟೋಬರ್ 2022 (18:07 IST)
ಮಕ್ಕಳ ಹಕ್ಕು ಆಯೋಗದಲ್ಲಿ ಒಂದು ವರ್ಷದಿಂದ ಅಧ್ಯಕ್ಷರ ಸ್ಥಾನ ಖಾಲಿ ಇದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದ್ರು ನ್ಯಾಯ ಸಿಗ್ತಿಲ್ಲ ಅಂತಾ ರಾಜ್ಯ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳು ಪೋಷಕರು ಸೇರಿದಂತೆ ನೃಪತುಂಗ ರಸ್ತೆಯಲ್ಲಿರುವ ಮಕ್ಕಳ ಆಯೋಗದ ಎದುರು ಪ್ರತಿಭಟನೆ ಮಾಡಿದ್ದಾರೆ.
 
ರಾಜ್ಯದಲ್ಲಿ ಮಕ್ಕಳ ರಕ್ಷಣೆ ಆಯೋಗ ಬದ್ಕಿದ್ಯಾ ಸತ್ತಿದ್ಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ .ಇವತ್ತು ಕೂಡ  550ಕ್ಕು ಹೆಚ್ಚು ದೂರು ವಿಚಾರಣೆ ಆಗದೇ ಹಾಗೇ ಉಳಿದಿವೆ ಎಂದು ರಾಜ್ಯ ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗನಂದ ಕಿಡಿಕಾರಿದಾರೆ.
 
ಮುರುಘಾ ಮಠದ ಸ್ವಾಮೀಜಿ ನಿರಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಿರೋ ಲೈಂಗಿಕ ಪ್ರಕರಣ ವಿಚಾರ  ಆಗಿರಬಹುದು.ಮಂಡ್ಯ ಮಳವಳ್ಳಿ ಶಿಕ್ಷಕನ ಪ್ರಕರಣ ಆಗಿರಬಹುದು ,ಇವುಗಳಲ್ಲಿ  ಆಯೋಗ ಸುಮೋಟೋ ಕೇಸ್ ದಾಖಲು ಮಾಡಿಕೊಳ್ಳಬೇಕು.ಆದ್ರೆ ಯಾವ  ಕೆಲಸವನ್ನು ಕೂಡ ಮಾಡಿಲ್ಲ , ಬದಲಿಗೆ ಇಲ್ಲಿ ಕೊಡೋ ದೂರಿಗೆ ಸಹ ಸ್ಪಂದನೆ ಇಲ್ಲ .ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದ್ದೂ ಸತ್ತ ಹಾಗೇ ಇದೆ .ಇನ್ನು ಎಷ್ಟು ದಿನ ಬೇಕು ಈ ಆಯೋಗಕ್ಕೆ ಒಂದು ಅಧ್ಯಕ್ಷರ ನೇಮಕ ಮಾಡೋಕೆ? ಮಕ್ಕಳ ಹಕ್ಕು, ಮಕ್ಕಳ ರಕ್ಷಣೆ ಮಾಡಬೇಕು ಅಂತ ಹೇಳಿ ಆಯೋಗ ರಚನೆಯಾಗಿದೆ.ಆದ್ರೆ ಎಷ್ಟೇ ಅಲೆದಾಡಿದ್ರೂ ಇಲ್ಲಿ ನ್ಯಾಯ ಸಿಗ್ತಿಲ್ಲ.ಮುಖ್ಯಮಂತ್ರಿಗಳೇ ದಯಮಾಡಿ ಮಧ್ಯ ಪ್ರವೇಶ ಮಾಡಿ ಬಾಕಿಯಿರುವ ಪ್ರಕರಣ ಇತ್ಯರ್ಥ ಮಾಡಿ.ಸಚಿವರೇ ಆದಷ್ಟು ಬೇಗ ಒಬ್ಬ ಅಧ್ಯಕ್ಷರ ನೇಮಕ ಮಾಡಿ ಅಂತ ಲಕ್ಷಾಂತರ ಪೋಷಕರ ಪರವಾಗಿ ಯೋಗನಂದ  ಆಗ್ರಹ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ