ಇಸ್ಪೀಟ್ ಕ್ಲಬ್ ಮಾಲೀಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅಂದರ್

ಸೋಮವಾರ, 30 ಜುಲೈ 2018 (17:10 IST)
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯ ಮಣಿಪಾಲದ ಇಸ್ಪಿಟ್ ಕ್ಲಬ್ ಮಾಲಿಕ ಗುರು ಪ್ರಸಾದ್ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ  ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಯಾಣಪುರ ನಿವಾಸಿ ರಂಜಿತ್ ಪಿಂಟೋ ಬಂಧಿತ ಆರೋಪಿ. ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈಗಾಗಲೇ ಮೂವರು ಆರೋಪಿಗಳಾದ ಕೊಡಂಕೂರು ನ್ಯೂ ಕಾಲನಿಯ ಪ್ರದೀಪ್ ಪೂಜಾರಿ, ಕಲ್ಯಾಣಪುರದ ಸುಜಿತ್ ಪಿಂಟೋ ಹಾಗೂ ಕುಂಜಿಬೆಟ್ಟು ಕಕ್ಕುಂಜೆಯ ರಾಜೇಶ್ ಪೂಜಾರಿ ಎಂಬವರನ್ನು ಬಂದಿಸಲಾಗಿದೆ.

 ತಲೆಮರೆಸಿಕೊಂಡಿದ್ದ ರಂಜಿತ್ ಪಿಂಟೋನನ್ನು ಕಲ್ಯಾಣಪುರ ಸಮೀಪ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಪೊಲೀಸ್ ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕ್ಲಬ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿತ್ತು. ಕಟ್ಟಡದ ಹೊರ ಭಾಗದಲ್ಲಿದ್ದ ಸಿಸಿ ಟಿವಿಯಲ್ಲಿ ಆರೋಪಿಗಳ ಕಾರಿನ ನಂಬರ್ ಪತ್ತೆಯಾಗಿತ್ತು. ಇದರ ಆಧಾರದಲ್ಲಿ ಪೊಲೀಸರಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಮೊನ್ನೆ ರಾತ್ರಿ ಬೆದರಿಕೆ ಕರೆ ಬಂದಿತ್ತು ಎನ್ನಲಾದ ಹಿನ್ನೆಲೆಯಲ್ಲಿ ಮೊಬೈಲ್ ಕಾಲ್ ರೆಕಾರ್ಡ್ಗಳನ್ನು ಕೂಡ ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚಣೆ ನಡೆಸಿದ್ದರು. ಮಣಿಪಾಲದಲ್ಲಿರುವ ಕ್ಲಬ್ನೊಳಗೆ ನುಗ್ಗಿದ್ದ ದುಷ್ಕರ್ಮಿಗಳು ಗುರುಪ್ರಸಾದ್ ಭಟ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಗುರುಪ್ರಸಾದ್ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗುರುಪ್ರಸಾದ್ ಹಲವು ಮಂದಿಯ ಜೊತೆ ಇಸ್ಪೀಟ್ ಕ್ಲಬ್ಗೆ ಸಂಬಂಧಿಸಿದ ಹಣಕಾಸು ವ್ಯವಹಾರ ಹೊಂದಿದ್ದು, ಇದೇ ಕಾರಣಕ್ಕೆ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆಂಬುದು ತಿಳಿದುಬಂದಿದೆ. ಬಹಳಷ್ಟು ದುಂದು ವೆಚ್ಚ ಮಾಡುತ್ತಿದ್ದ ಗುರುಪ್ರಸಾದ್, ಹಲವು ಮಂದಿಯಿಂದ ಹಣ ಪಡೆದು ಹಿಂತಿರುಗಿಸದೆ ದ್ವೇಷ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ