ರಸ್ತೆ ಗುಂಡಿಗಳಿಂದ ಜನರಿಗೆ ಶುರುವಾಯ್ತು ಆತಂಕ

ಬುಧವಾರ, 27 ಜುಲೈ 2022 (19:45 IST)
ಹಲಸೂರಿನಿಂದ ಬೈಯಪ್ಪನಹಳ್ಳಿವರೆಗೂ ಮುಖ್ಯರಸ್ತೆ ಗುಂಡಿಗಳಿಂದ ,ಧೂಳಿನಿಂದ ಆಧ್ವಾನವಾಗಿದ್ದು .ಈ ರಸ್ತೆಯ ಕಡೆ ಯಾರು ಗಮನಹಾರಿಸ್ತಿಲ್ಲ ಅಂತಾ ಅಂತಾ ಜನರು ಆಕ್ರೋಶ ಹೊರಹಾಕ್ತಿದ್ದಾರೆ.ತ್ಯ ಈ ಒಂದು ರಸ್ತೆಯ ಮುಖಾಂತರ ಮಾರ್ಕೆಟ್ ,ಮೆಜೆಸ್ಟಿಕ್, ಹೊಸಕೊಟೆ, ಮಾಲೂರು, ಕೋಲಾರ ಸೇರಿದಂತೆ ಹಲವು ಕಡೆ ವಾಹನಗಳು ಸಂಚಾರಿಸುತ್ತೆ. ಸಾವಿರಾರು ವಾಹನಗಳು ಸಂಚಾರಿಸುವ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ವಾಹನಸವಾರರು ಜೀವ ಭಯದಲ್ಲಿ ವಾಹನ ಚಾಲಿಸುತ್ತಾರೆ. ಎಷ್ಟೋ ಬಾರಿ ಈ ರಸ್ತೆ ಅಪಘಾತವಾಗಿದೆ. ರಸ್ತೆಯಲ್ಲಿ ನೋಡಿಕೊಂಡು ವಾಹನ ಓಡಿಸಬೇಕು.ಸ್ವಲ್ಪ ಯಮಾರಿದ್ರೆ ಸಿದ್ದ ಯಮಾಲೋಕಕ್ಕೆ ಹೋಗಬೇಕಾಗುತ್ತೆ.
 
ಎಷ್ಟೋ ಜನರು ಗುಂಡಿಗಳಿಗೆ ಬಿದ್ದ ಸಾವನಾಪ್ಪುತ್ತಿದ್ರು.ಬಿಬಿಎಂಪಿ ಮಾತ್ರ ಬುದ್ದಿ ಕಲಿತ್ತಿಲ್ಲ. ಸಾವಿರಾರು ವಾಹನಗಳು ಓಡಾಡು ಹಲಸೂರಿನ ಮುಖ್ಯ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೂ ಗುಂಡಿಗಳಿದ್ರು ಬಿಬಿಎಂಪಿ ಡೋಟ್ ಕೇರ್ ಅಂತಿದೆ. ಇನ್ನು ಜನ ಎಷ್ಟು ಬಾಯಿ ಬಾಯಿಬೋಡೆದುಕೊಂಡ್ರು ಅಧಿಕಾರಿಗಳು ಗಮನಹಾರುಸದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ