ಗ್ಯಾರಂಟಿಗಳಿಂದ ಆರ್ಥಿಕ ಹೊರೆಯಾಗುತ್ತಿರುವುದು ನಿಜ, ಆದರೆ: ಎಚ್‌ಕೆ ಪಾಟೀಲ

Sampriya

ಸೋಮವಾರ, 24 ಫೆಬ್ರವರಿ 2025 (17:12 IST)
ಬಳ್ಳಾರಿ: ಸದ್ಯ ರಾಜ್ಯ ರಾಜಕಾರಣದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಚ್‌ಕೆ ಪಾಟೀಲ ಅವರು ಗ್ಯಾರಂಟಿಗಳ ಕುರಿತು ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಬಜೆಟ್‌ನಲ್ಲಿ ಉತ್ತರ ನೀಡಲಿದೆ ಎಂದರು.

ಬಳ್ಳಾರಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಗೃಹಜ್ಯೋತಿ, ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡುತ್ತೇವೆ. ಗ್ಯಾರಂಟಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಜಾರಿ ಮಾಡಿರುವ ಗ್ಯಾರಂಟಿಯನ್ನು ಮುಂದುವರೆಸುತ್ತೇವೆ ಎಂದರು.

ಗ್ಯಾರಂಟಿಗಳಿಂದ ಆರ್ಥಿಕ ಹೊರೆಯಾಗುತ್ತಿರುವುದು ನಿಜ. ₹50 ಸಾವಿರ ಕೋಟಿ ಸಣ್ಣ ಮೊತ್ತವಲ್ಲ. ಘೋಷಣೆ ಮಾಡಿರುವ ಗ್ಯಾರಂಟಿ ನಮ್ಮ ಬದ್ಧತೆಯಾಗಿದ್ದು, ಅದನ್ನು ಮುಂದುವರಿಯುತ್ತೇವೆ. ಸದ್ಯ ಗ್ಯಾರಂಟಿ ಬಗ್ಗೆ ಕೇಳಿಬರುತ್ತಿರುವ ಪ್ರಶ್ನೆಗೆ ಬಜೆಟ್‌ನಲ್ಲಿ ಉತ್ತರಿಸುತ್ತೇವೆ ಎಂದರು.

ಶಿಸ್ತಿನ ಕಾಂಗ್ರೆಸ್‌ ನಾಯಕರು ಯಾರೂ ಅಧ್ಯಕ್ಷ, ಸಿಎಂ ಬದಲಾವಣೆ ಬಗ್ಗೆ ಮಾತನಾಡಬಾರದು ಎಂದು ವರಿಷ್ಠರು ಹೇಳಿದ್ದಾರೆ. ನಾವು ಅದನ್ನು ಪಾಲಿಸುತ್ತಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ