ಹಿಂದೆ ಏನಾಯ್ತು ಅನ್ನೋದು ಮುಖ್ಯವಲ್ಲ, ಇಂದು ಏನಾಯ್ತು ಎಂಬುದು ಮುಖ್ಯ: ದಿನೇಶ್ ಗುಂಡೂರಾವ್

ಮಂಗಳವಾರ, 19 ಸೆಪ್ಟಂಬರ್ 2023 (14:16 IST)
ಬೆಂಗಳೂರು : ಹಿಂದೆ ಏನಾಯಿತು ಎಂಬುದು ಮುಖ್ಯ ಅಲ್ಲ, ಇವತ್ತು ಏನಾಯಿತು ಎಂಬುದು ಮುಖ್ಯ. ನೀರಿನ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಈಗಲೂ ಒಗ್ಗಟ್ಟಾಗಿ ಇರಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಾವೇರಿ ಜಲವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಕೆಲವು ತೀರ್ಮಾನ ತೆಗೆದುಕೊಂಡಿತ್ತು. ಈ ಬೆಳವಣಿಗೆ ನಂತರ ಸಿಎಂ, ಡಿಸಿಎಂ ಕುಳಿತು ಒಂದು ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ ಪರವಾಗಿ ಏನೇನು ತೀರ್ಮಾನ ತೆಗೆದುಕೊಳ್ಳಬೇಕು. ಅದನ್ನು ನಮ್ಮ ಸರ್ಕಾರ ಖಂಡಿತಾ ಮಾಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಪಡುವಂತದ್ದು ಇಲ್ಲ ಎಂದರು.

ಒಂದೊಂದು ಸನ್ನಿವೇಶದಲ್ಲಿ ಒಂದೊಂದು ಬೇಡಿಕೆ ಬರುತ್ತಿರುತ್ತವೆ. ಮಳೆ ಕಡಿಮೆಯಾದಾಗ ಬೇಡಿಕೆಗಳು ಹೆಚ್ಚಾಗುತ್ತದೆ. ಬೇಡಿಕೆಗಳು ಹೆಚ್ಚಾದಾಗ ಒತ್ತಡಗಳು ಬರುತ್ತವೆ. ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ಪಾದಯಾತ್ರೆ ಮಾಡಿದ್ವಿ, ನೀರು ಕೊಡಲು ಆಗಲ್ಲ ಎಂದು ಹೇಳಬೇಕಾಗಿತ್ತು.

ತಮಿಳುನಾಡು – ಕರ್ನಾಟಕ ನಡುವೆ ಸಾಕಷ್ಟು ವ್ಯಾಜ್ಯಗಳು ನಡೆದಿವೆ. ಈಗ ಪ್ರಾಧಿಕಾರ ರಚನೆ ಆಗಿದೆ. ಒಂದೆಡೆ ಕಾನೂನಾತ್ಮಕ ಹೋರಾಟ ಮಾಡ್ತೇವೆ. ಪ್ರಾಧಿಕಾರ ರಚನೆ ಸಂಪೂರ್ಣ ನಿಯಂತ್ರಣ ಅದಕ್ಕೆ ನೀಡಲಾಗಿದೆ ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ