ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ತಡೆಯೊಡ್ಡಲು ದೂರು ನೀಡಿದವರಿಗೆ ಜಗ್ಗೇಶ್ ತಿರುಗೇಟು

ಭಾನುವಾರ, 29 ಏಪ್ರಿಲ್ 2018 (11:20 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಹಿನ್ನಲೆಯಲ್ಲಿ ನಟ ಜಗ್ಗೇಶ್ ತೀರ್ಪುಗಾರರಾಗಿರುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ತಡೆ ನೀಡುವಂತೆ ದೂರು ನೀಡಿದವರಿಗೆ ಜಗ್ಗೇಶ್ ತಿರುಗೇಟು ನೀಡಿದ್ದಾರೆ.

ಜಗ್ಗೇಶ್ ಸಿನಿಮಾ ಮತ್ತು ರಿಯಾಲಿಟಿ ಶೋಗಳಿಂದ ಮತದಾರರಿಗೆ ಅಮಿಷವೊಡ್ಡಿದಂತಾಗುತ್ತದೆಂದು ದೂರಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದಕ್ಕೆ ಇದೀಗ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

‘ಓಟವನ್ನು ತಡೆಯಲು ವಾಮಮಾರ್ಗ ಅನುಸರಿಸುವುದು ಇವರಿಗೆ ಹೊಸದಲ್ಲ. ನಡೆಯಲಿ ರಾಯರಿದ್ದಾನೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ