ಸಿಎಂ ಆಗಲು ದೇವರಿಗೆ " ಹರಕೆ ಕಟ್ಟಿರುವ ಬಿಎಸ್ ವೈ"

ಶನಿವಾರ, 28 ಏಪ್ರಿಲ್ 2018 (13:56 IST)
ಈ ದೇವಸ್ಥಾನಕ್ಕೆ ಅನೇಕ ಘಟಾನುಘಟಿ ರಾಜಕಾರಣಿಗಳು ಬಂದು ಕಾಯಿ ಕಟ್ಟಿ ಹೋಗಿದ್ದಾರೆ, ಅವರಲ್ಲಿ ಕೆಲವರು ಮುಖ್ಯಮಂತ್ರಿಗಳಾಗಿದ್ದಾರೆ. ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ರೇಸ್ ನಲ್ಲಿರುವವರು ಸಹ ಇಲ್ಲಿಗೆ ಬಂದು ಕಾಯಿ ಹರಕೆ ಕಟ್ಟಿ ಹೋಗಿದ್ದಾರೆ.
 ರಾಯಚೂರು ಜಿಲ್ಲೆಯ ಕಲ್ಲೂರು ಗ್ರಾಮದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನವು ಸಹ ಭಕ್ತರಿಗೆ ವರ ನೀಡುವ ವರಪ್ರಧಾಯಿನಿ ಎಂಬ ಖ್ಯಾತಿ ಹೊಂದಿದ್ದಾಳೆ, ಅದಕ್ಕಾಗಿ ಇಲ್ಲಿಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವಸ್ಥಾನದಲ್ಲಿ ತೆಂಗಿನ ಕಾಯಿಯನ್ನು ಕಟ್ಟಿ ಹೋಗುವ ಪದ್ದತಿ ಇದೆ, ಇಲ್ಲಿ ತೆಂಗಿನ ಕಾಯಿ ಕಟ್ಟಿ ಹೋದರೆ ಅವರ ಇಷ್ಟಾರ್ಥ ಸಿದ್ದಿಯಾಗುವ ನಂಬಿಕೆ ಇರುವದರಿಂದ  ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಕಳೆದ ಡಿಸೆಂಬರ್ 12 ರಿಂದ 15 ರವರೆಗೆ ರಾಯಚೂರು ಜಿಲ್ಲೆಯಲ್ಲಿ ಪರಿವರ್ತನಾ ರ್ಯಾಲಿಗೆ ಆಗಮಿಸಿದಾಗ ದೇವಸ್ಥಾನಕ್ಕೆ ಬಂದು ತೆಂಗಿನ ಕಾಯಿ ಕಟ್ಟಿ ಹೋಗಿದ್ದಾರೆ.
 
ಮಹಾಲಕ್ಷ್ಮಿ ದೇವಸ್ಥಾನವು ಸುಮಾರು 400 ವರ್ಷಗಳ ಇತಿಹಾಸವಿರುವ ದೇವಸ್ಥಾನವಾಗಿದ್ದು, ಕಲ್ಲೂರಿನ ಲಕ್ಷ್ಮಿಕಾಂತಾಚಾರ್ಯರ ಭಕ್ತಿಗೆ ಒಲಿದು ಕೊಲ್ಲಾಪುರದಿಂದ ಇಲ್ಲಿ ಬಂದಿದ್ದು, ಗಂಧ ತೇಯಿಯುವ ಸಾಣೆಕಲ್ಲಿನಲ್ಲಿ ಪ್ರತ್ಯಕ್ಷವಾಗಿದ್ದಾಳೆ ಎನ್ನುವ ಪ್ರತೀತಿ, ಇದರಿಂದಾಗಿ ಭಕ್ತರಿಗೆ ವರ ನೀಡುವ ದೇವಿ ಎಂದು ಮೊದಲಿನಿಂದ ಇಲ್ಲಿಯ ಜನ ನಂಬಿಕೆಕೊಂಡು ಬಂದಿದ್ದಾರೆ, ಈ ಹಿಂದೆ ಇಲ್ಲಿ ಅನೇಕ ಬಾರಿ ರಾಜಕಾರಣಿಗಳು ಬಂದು ತೆಂಗಿನ ಕಾಯಿ ಕಟ್ಟಿ ಹೋಗಿದ್ದಾರೆ, ನಂತರ ಅವರಿಗೆ ಅಧಿಕಾರ ಪ್ರಾಪ್ತಿಯಾಗಿದೆ ಎನ್ನಲಾಗಿದೆ, ಅದರಂತೆ ಈಗ ಯಡಿಯೂರಪ್ಪ ಅಧಿಕಾರಕ್ಕಾಗಿ ತೆಂಗಿನ ಕಾಯಿ ಕಟ್ಟಿ ಹೋಗಿದ್ದಾರೆ.
 
  ಈ ಹಿಂದೆ ಧರ್ಮಸಿಂಗ ಹಾಗು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗುವ ಮುನ್ನ ಅವರಗಳ ಪತ್ನಿಯರು ಇಲ್ಲಿ ತೆಂಗಿನ ಕಾಯಿ ಕಟ್ಟಿ ಹೋಗಿದ್ದರಂತೆ, ಈಗ ಯಡಿಯೂರಪ್ಪ ಸರದಿ, ಕಲ್ಲೂರು ಮಹಾಲಕ್ಷ್ಮಿ ಯಡಿಯೂರಪ್ಪನವರಿಗೆ ವರ ನೀಡುತ್ತಾಳೆಯೆ ಎಂಬುವದನ್ನು ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ