ಜನಾರ್ಧನ ರೆಡ್ಡಿ ಬಂಧನ: ಡಿಸಿಎಂ ಹೇಳಿದ್ದೇನು?

ಬುಧವಾರ, 14 ನವೆಂಬರ್ 2018 (14:05 IST)
ಜನಾರ್ಧನ ರೆಡ್ಡಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಗೆ ಕೋರ್ಟ ತರಾಟೆಗೆ ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಸಿಸಿಬಿಗೆ ಕೋರ್ಟ್ ತರಾಟೆ ವಿಚಾರವಾಗಿ
ಕೋರ್ಟ್ ಗೆ ಪೋಲಿಸರು ತಕ್ಕ ಉತ್ತರ ಕೊಡ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಏನು ಕೆಲಸ ಮಾಡಬೇಕೆಂದು  ಪೊಲೀಸರಿಗೆ ಗೊತ್ತಿದೆ ಎಂದಿದ್ದಾರೆ.

ರೆಡ್ಡಿ ಬಂಧನದ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಪೊಲೀಸರು ಕೋರ್ಟ್ ಗೆ ಸೂಕ್ತ ದಾಖಲಾತಿಗಳನ್ನು  ಸಲ್ಲಿಸುತ್ತಾರೆ ಎಂದರು.

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ವಿಚಾರವಾಗಿ ಮಾತನಾಡಿದ ಅವರು, ಯಾರನ್ನೂ ನಾವು ಟಾರ್ಗೆಟ್ ಮಾಡಿಲ್ಲ, ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮ. ಇದಕ್ಕೆ ಟೀಕೆ ಟಿಪ್ಪಣಿಗಳನ್ನು ಮಾಡಬಹುದು. ಆದ್ರೆ ಅವಹೇಳನಕಾರಿ ಹೇಳಿಕೆಗಳನ್ನ ನೀಡಬಾರದು. ಹೇಳಿಕೆ ಯಾರೇ ನೀಡಿದ್ರೂ ಕಾನೂನು ಕ್ರಮಕ್ಕೆ ನಾವೇ ಸೂಚಿಸಿದ್ದೇವೆ. ಹಿಂದೂ ದೇವರ ಮೇಲೆ ಚಿಂತಕ ಭಗವಾನ್ ಅವಹೇಳನಕಾರಿ ಹೇಳಿಕೆ ವಿಚಾರವಾಗಿಯೂ ಅವರ ಮೇಲೂ ಕ್ರಮ ಕೈಗೊಳ್ತೀವಿ ಎಂದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ