ಬಿಜೆಪಿಗೆ ಸಂಕಷ್ಟ: ನಿಷೇಧಿತ ಕಂಪೆನಿಗಳ ಪಟ್ಟಿಯಲ್ಲಿ ಶೆಟ್ಟರ್ ಕುಟುಂಬ

ಗುರುವಾರ, 21 ಸೆಪ್ಟಂಬರ್ 2017 (13:01 IST)
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಿಷೇಧಿತ ಶೆಲ್ ಕಂಪೆನಿಗಳಲ್ಲಿ ನಿರ್ದೇಶಕರಾಗಿರುವ ಬಿಜೆಪಿ ಮುಖಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪತ್ನಿ ಮತ್ತು ಪುತ್ರರು ಸ್ಥಾನಪಡೆದು ಪಕ್ಷದ ನಿಯಮ ಉಲ್ಲಂಘಿಸಿರುವುದು ಬಹಿರಂಗವಾಗಿದೆ.  
ನಿಷೇಧಿತ ಕಂಪೆನಿಗಳ ಪಟ್ಟಿಯ ನಿರ್ದೇಶಕರಾಗಿ ಸಹಕಾರ ಸಚಿವ ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್ ಪತ್ನಿ ಮತ್ತು ಪುತ್ರರು, ಟಿನಿಸ್ ಆಟಗಾರ ಲಿಯಾಂಡರ್ ಪೇಸ್, ಮಾಜಿ ಸಿಎಂ ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್, ಖ್ಯಾತ ಉದ್ಯಮಿ ದಿನೇಶ್ ಸಿಪಾನಿ ಸೇರಿದಂತೆ ಇತರ ಉದ್ಯಮಿಗಳು ಎಂಸಿಎ ಆದೇಶದ ಪ್ರಕಾರ ಐದು ವರ್ಷಗಳವರೆಗೆ ಕಂಪೆನಿಗಳಲ್ಲಿ ನಿರ್ದೇಶಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.
 
ಎಂಸಿಎ ಪ್ರಕಾರ, ಕರ್ನಾಟಕದ 21,798 ನಿರ್ದೇಶಕರನ್ನು ಕಂಪೆನಿ ರಿಜಿಸ್ಟ್ರಾರ್ (ಆರ್‌ಒಸಿ) ವ್ಯಾಪ್ತಿಯೊಳಗೆ 2013 ರ ಕಾಯ್ದೆ 164 (2) (ಎ) ಅಡಿಯಲ್ಲಿ ಅನರ್ಹಗೊಳಿಸಲಾಗಿದೆ. ಕಂಪೆನಿಯ ನಿರ್ದೇಶಕನಾಗಿರುವ ಯಾವುದೇ ವ್ಯಕ್ತಿ ವಾರ್ಷಿಕ ಆದಾಯ ಘೋಷಿಸದಿದ್ದಲ್ಲಿ ಅಂತಹ ನಿರ್ದೇಶಕನನ್ನು ಮೂರು ವರ್ಷಗಳರೆಗೆ ಅನರ್ಹಗೊಳಿಸಲಾಗುವುದು ಎಂದು ತಿಳಿಸಿದೆ.  
 
ಹಲವು ಇತರ ರಾಜಕಾರಣಿಗಳ ಪೈಕಿ, ರಮೇಶ್ ಜಾರಕಿಹೊಳಿ ಅವರ ಕುಟುಂಬದ ಸದಸ್ಯರಾದ ಲಕ್ಕಣ್ಣ ಜಾರಕಿಹೊಳಿ, ಭೀಮಾಶಿ ಜಾರಕಿಹೊಳಿ, ಲಕ್ಷ್ಮಣರಾವ್ ಜಾರಕಿಹೊಳಿ,ಮತ್ತು ಸುವರ್ಣ ಜಾರಕಿಹೊಳಿ, ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ, ಶುಗರ್ಸ್ ಲಿಮಿಟೆಡ್‌ನಿಂದ ಆದಾಯವನ್ನು ಸಲ್ಲಿಸದಿರುವ ಹಿನ್ನೆಲೆಯಲ್ಲಿ ಅನರ್ಹಗೊಳಿಸಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
 
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಂದ ತತ್ತರಿಸಿರುವ ಬಿಜೆಪಿಗೆ, ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಮತ್ತು ಪುತ್ರರಾದ ಸಂಕಲ್ಪ ಮತ್ತು ಪ್ರಶಾಂತ್ ಶೆಟ್ಟರ್ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿರುವುದು ಬಿಜೆಪಿಗೆ ಮತ್ತೊಂದು ಸಂಕಷ್ಟ ತಂದಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ