ಅಲ್ಲದೇ ಗೌರವಯುತ ಸ್ಥಾನದಲ್ಲಿರುವ ಸ್ವಾಮೀಜಿಗಳು ಮಾರ್ಗದರ್ಶನ ನೀಡುವ ಬದಲು ಎಚ್‌ಡಿಕೆ ವಿರುದ್ಧವಾಗಿ ಮಾತನಾಡುವ ಮೂಲಕ ಒಂದು ಪಕ್ಷವನ್ನ ತುಳಿಯಲು ಹವಣಿಸಿದ್ದಾರೆ ಎಂದು ಆರೋಪಿಸಿದ್ರು. ಇನ್ನು ಒಂದು ಪಕ್ಷದ ಪರ ನಿಲ್ಲುವ ಬದಲು ಸರ್ಕಾರಗಳು ತಪ್ಪು ಮಾಡಿದಾಗ ಕಿವಿ ಹಿಂಡುವ ಕೆಲಸ ಮಾಡುವುದನ್ನ ಬಿಟ್ಟು ಸಮಾಜವನ್ನ ಒಡೆಯುವ ಕೆಲಸಕ್ಕೆ ಸ್ವಾಮೀಜಿಗಳು ಮುಂದಾಗಬಾರದು ಎಂದು ಶಿವಚಾರ್ಯ ಸ್ವಾಮೀಜಿ ವಿರುದ್ಧ ಕಿಡಿಕಾರಿದ್ರು. ಈ ಕೂಡಲೇ ಸಾಣೇಹಳ್ಳಿ ಶಿವಚಾರ್ಯ ಸ್ವಾಮೀಜಿಯವರು ತಮ್ಮ ನಿಲುವನ್ನ ಬದಲಿಸಿ ಹೇಳಿಕೆ ವಾಪಸ್ಸು ಪಡೆಯುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಅಗ್ರಹಿಸಿದ್ರು.