ಅನರ್ಹ ಶಾಸಕರಿಗೆ ಪೆಟ್ಟು ಕೊಡಲು ಮುಂದಾದ ಜೆಡಿಎಸ್

ಮಂಗಳವಾರ, 15 ಅಕ್ಟೋಬರ್ 2019 (18:06 IST)
ರಾಜ್ಯದಲ್ಲಿ ನಡೆಯಲಿರೋ ಉಪ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಅನರ್ಹ ಶಾಸಕರಿಗೆ ಖೆಡ್ಡಾ ತೋಡಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.

ಕೆಆರ್ ಪೇಟೆಯ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ನೇತೃತ್ವದಲ್ಲಿ ಉಪಚುನಾವಣೆಯ ಸಮರದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು.

ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲು ಅಕ್ಟೋಬರ್‌ 18 ರಂದು ಕೆ.ಆರ್.ಪೇಟೆ ಪಟ್ಟಣಕ್ಕೆ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು.

ಮಂಡ್ಯದ ಕೃಷ್ಣರಾಜಪೇಟೆ ಪಟ್ಟಣಕ್ಕೆ ಜೆಡಿಎಸ್ ಸರ್ವೋಚ್ಛ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆಗಮಿಸಿ ಬೃಹತ್ ಕಾರ್ಯಕರ್ತರ ಸಭೆ ನಡೆಸಿ ಉಪ ಚುನಾವಣೆಯ ಸಮರಕ್ಕೆ ಸರ್ವಸಮ್ಮತವಾದ ಅಭ್ಯರ್ಥಿಯನ್ನು ಆಯ್ಕೆಮಾಡಿ ರಣಕಹಳೆ ಊದಲಿದ್ದಾರೆ.

ಶತಾಯಗತಾಯ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಾವುಟವನ್ನು ಹಾರಿಸಿ ಪಕ್ಷದ್ರೋಹ ಮಾಡಿ ಹೋಗಿರುವ ಅನರ್ಹ ಶಾಸಕ ನಾರಾಯಣಗೌಡ ಅವರಿಗೆ ತಕ್ಕಪಾಠ ಕಲಿಸಲು ಹೆಚ್.ಡಿ.ದೇವೇಗೌಡರು ಹಾಗೂ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ.    



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ