ಪಿಎಸ್ ಐ ವೇಷ ಧರಿಸಿ ಚಿನ್ನಾಭರಣ ದೋಚಿದ ಖದೀಮ

ಸೋಮವಾರ, 19 ನವೆಂಬರ್ 2018 (13:30 IST)
ಪಿ ಎಸ್ ಐ ವೇಷ ಧರಿಸಿ ಬಂದ ನಕಲಿ ವ್ಯಕ್ತಿಯೊಬ್ಬ ಜನರಿಂದ ನಗದು, ಚಿನ್ನಾಭರಣ ದೋಚಿದ ಘಟನೆ ನಡೆದಿದೆ.

ನಕಲಿ ಇನ್ಸಪೆಕ್ಟರ್ ವೇಷದಲ್ಲಿ ಬಂದ ದುಷ್ಕರ್ಮಿಯೊಬ್ಬ ವ್ಯಕ್ತಿಯೊಬ್ಬನ ಬಳಿ ಇದ್ದ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ.

ಕಲಬುರಗಿ ನಗರದ ಪಂಜಾಬ್ ಬೂಟ್ ಹೌಸ್ ಹತ್ತಿರ ಈ ಘಟನೆ ನಡೆದಿದೆ. ಸುರೇಶ ಮಂಠಾಳೆ ಮೋಸ ಹೋದ ವ್ಯಕ್ತಿಯಾಗಿದ್ದಾರೆ. ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ಸುರೇಶ ಮಂಠಾಳೆ ತೆರಳುತ್ತಿದ್ದರು.

ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ನಿಮ್ಮ ಹತ್ತಿರ ಇರುವ ಹಣ ಹಾಗೂ ಚಿನ್ನಾಭರಣವನ್ನು ಕೈ ವಸ್ತ್ರದಲ್ಲಿ ಹಾಕಿ ಎಂದು ನಕಲಿ ಪಿಎಸ್ ಐ ಹೇಳಿದ್ದಾನೆ.

ಆತನ ಮಾತನ್ನು ನಿಜವೆಂದು ನಂಬಿದ ವ್ಯಕ್ತಿ ತನ್ನಲ್ಲಿದ್ದ, ನಗದು ಹಾಗೂ ಚಿನ್ನಾಭರಣವನ್ನು ಕರವಸ್ತ್ರದಲ್ಲಿ ಹಾಕಿದ್ದಾನೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ನಕಲಿ ಪಿಎಸ್ ಐ ನಗದು ಹಾಗೂ ಚಿನ್ನಾಭರಣ ಎಗರಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ