ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಒಂದೇ ಕುಟುಂಬದ ಇಬ್ಬರು ಸಹೋದರರ ಜೊತೆ ಈ ಹಿಂದೆ ಡೇಟಿಂಗ್ ಮಾಡಿದ್ದರು. ಅದರ ಬಗ್ಗೆ ಈ ಶೋನಲ್ಲಿ ಏನಾದರೂ ಹೇಳುತ್ತೀರಾ? ಎಂದು ಕರಣ್ ಜೋಹರ್ ಪ್ರಶ್ನಿಸಿದ್ದಕ್ಕೆ ಇಬ್ಬರು ದಿಗ್ಭ್ರಾಂತರಾದರು. ಇದೆಲ್ಲ, ಇವರಿಗೆ ಹೇಗೆ ಗೊತ್ತಾಯಿತು ಎಂದು ಒಂದು ಕ್ಷಣ ಗಲಿಬಿಲಿಗೊಂಡರು. ತಕ್ಷಣ ಜಾಹ್ನವಿ ಕಡೆ ನೋಡಿದ ಸಾರಾ, ಈ ಬಗ್ಗೆ ಕೇಳುತ್ತಾರೆ ಅಂತಾ ನಿನಗೆ ಮೊದಲೇ ತಿಳಿದಿತ್ತಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಾಹ್ನವಿ ನನಗೆ ಗೊತ್ತಿರಲಿಲ್ಲ ಎಂದರು. ಬಳಿಕ ಮಾತನಾಡಿದ ಕರಣ್, ನನ್ನ ಮಾತಿನ ಅರ್ಥ ಏನೆಂದರೆ, ನೀವು ಈ ಹಿಂದೆ ಇಬ್ಬರು ಸಹೋದರರ ಜೊತೆ ಡೇಟಿಂಗ್ ಮಾಡಿದ್ದಿರಿ. ನಮ್ಮ ಮೂವರ ನಡುವೆ ಇರುವ ಸಾಮಾನ್ಯತೆ ಏನೆಂದರೆ, ನಾನಿದ್ದ ಕಟ್ಟಡದಲ್ಲಿ ಆ ಸಹೋದರರು ವಾಸಿಸುತ್ತಿದ್ದರು ಎಂದು ಕರಣ್ ಹೇಳಿದರು. ಇದರಿಂದ ಸಾರಾ ಮತ್ತು ಜಾಹ್ನವಿ ಚಕಿತರಾದರು.
ಆ ಇಬ್ಬರು ಸಹೋದರರು ಯಾರು ಅಂದರೆ, ವೀರ್ ಪಹಾರಿಯ ಮತ್ತು ಶಿಖರ್ ಪಹಾರಿಯ. ಇವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶಿಲ್ ಕುಮಾರ್ ಶಿಂಧೆ ಅವರ ಮೊಮ್ಮಕ್ಕಳು. ಜಾಹ್ನವಿ ಮತ್ತು ಸಾರಾ ಜೊತೆ ಇವರಿಬ್ಬರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀರ್ ಪಹಾರಿಯ ಜೊತೆ ಸಾರಾ ಅಲಿ ಖಾನ್ ಮತ್ತು ಶಿಖರ್ ಪಹಾರಿಯ ಜತೆ ಜಾಹ್ನವಿ ಕಪೂರ್ ಡೇಟಿಂಗ್ ಮಾಡಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಈ ವಿಚಾರವಾಗಿ ಸಾರಾ ಮತ್ತು ಜಾಹ್ನವಿ ಹಾಗೂ ಇಬ್ಬರು ಸಹೋದರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಬಾಲಿವುಡ್ನಲ್ಲಿ ಮಾತ್ರ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ