28 ಕ್ಕೂ ಹೆಚ್ಚು ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿದ್ದು ಆನ್ ಲೈನ್ ಮೂಲಕ ಮಾರ್ಚ್ 9 ರಿಂದ ಏಪ್ರಿಲ್ 9 ರೊಳಗಾಗಿ
www.kpsc.kar.nic.in ಎಂಬ ವೆಬ್ ಸೈಟ್ ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದೆ. ದ್ವಿತೀಯ ಪಿಯುಸಿ ಅಥವಾ ಸಮಾನ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ವೇಳೆ ಅಂಪಟ್ಟಿ, ಕನ್ನಡ ಮಾಧ‍್ಯಮ, ಗ್ರಾಮೀಣ ಮಾಧ‍್ಯಮ ಅಭ್ಯರ್ಥಿಗಳ ಮೀಸಲಾತಿ ಇದ್ದು, ಪ್ರಮಾಣ ಪತ್ರ ಒದಗಿಸಬೇಕು.
ಸಾಮಾನ್ಯ ವರ್ಗದವರಿಗೆ ಅರ್ಜಿ ಶುಲ್ಕ 635 ರೂ., ಹಿಂದುಳಿದ ವರ್ಗದವರಿಗೆ 335 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 85 ರೂ., ಎಸ್ ಸಿ/ಎಸ್ ಟಿ/ಪಿಡಬ್ಲ್ಯು/ ಪ್ರವರ್ಗ-1 ಅಭ್ಯರ್ಥಿಗಳಿಗೆ 35 ರೂ. ಅರ್ಜಿ ಶುಲ್ಕವಿದೆ. ಇದನ್ನು ಆಫ್ ಲೈನ್ ಚಲನ್ ಮೂಲಕ ಅಥವಾ ಆನ್ ಲೈನ್ ಮೂಲಕ ಪಾವತಿಸಬಹುದು.