ಹೆಬ್ಬಾಳ ಮೇಲ್ವೇತುವೆ ಅಗಲೀಕರಣಕ್ಕೆ ಒತ್ತಾಯ ಮಾಡಿದ ಕೈ ನಾಯಕರು

ಸೋಮವಾರ, 21 ನವೆಂಬರ್ 2022 (13:34 IST)
ಕೆಪಿಸಿಸಿ ವತಿಯಿಂದ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಒತ್ತಾಯಿಸಿ ಇಂದು ಪ್ರತಿಭಟನೆ ಮಾಡಲಾಗಿದೆ. ಮೇಲ್ಸೇತುವೆ ಹತ್ತಿರವಿರುವ ಎಸ್ಟೀಮ್ ಮಾಲ್ ಹತ್ತಿರ ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ  ರಾಮಲಿಂಗಾರೆಡ್ಡಿ , ಶಾಸಕರಾದ ಕೃಷ್ಣ ಬೈರೇಗೌಡ, ಭೈರತಿ ಸುರೇಶ್,ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
 
ಈ ವೇಳೆ ಕೃಷ್ಣ ಭೈರೇಗೌಡ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಮಾಡುವಂತೆ ಈ ಭಾಗದ ನಿವಾಸಿಗಳು ಹಾಗೂ ಸಂಘ ಸಂಸ್ಥೆಗಳು ಬಂದಿದ್ದರು.ಹಾಗೆಯೇ ಕಾಂಗ್ರೆಸ್ ಪಕ್ಷವು ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರ ಸಲಹೆಯಂತೆ ಈ ಭಾಗದ ಶಾಸಕರು ಹಾಗೂ ಮುಖಂಡರು ಕಾರ್ಯಕರ್ತರು ಭಾಗಿಯಾಗಲು ಹೇಳಿದ್ದಾರೆ.ಇಂದು ಯಾರಿಗೂ ತೊಂದರೆಯಾಗದಂತೆ ಇಲ್ಲಿ ಶಾಂತವಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
 
ಅಲ್ಲದೇ‌ ಮೂರು ವರೇ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಉದ್ಧಾರ ಮಾಡದೆ 40% ಕಮಿಷನ್ ಭ್ರಷ್ಟಾಚಾರ ದಲ್ಲಿ ಮುಳಿಗಿ ಹೋಗಿದೆ.ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ 84 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿತ್ತು.23 ಕೋಟಿ ರೂಪಾಯಿ ಕೆಲಸ ಕೂಡ ನಡೆದು ಹೋಗಿದೆ.ಕೆಲಸ ಅರ್ಧಕ್ಕೆ ನಿಂತು ಹೋಗಿ ಪಿಲ್ಲರ್ ಗಳು ತುಕ್ಕು ಹಿಡಿಯುತ್ತಿವೆ.ಆದಷ್ಟು ಬೇಗ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಸಮಸ್ಯೆಗೆ ಪರಿಹಾರ ನೀಡಬೇಕು  ಎಂದು ಕೃಷ್ಣ  ಭೈರೇಗೌಡ ಒತ್ತಾಯಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ