ಸಚಿವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ ಕೈ ನಿಯೋಗ

ಮಂಗಳವಾರ, 25 ಅಕ್ಟೋಬರ್ 2022 (17:14 IST)
ಮಹಿಳೆ ಮೇಲೆ ಸಚಿವ ಸೋಮಣ್ಣ ದರ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಿಯೋಗ ದೂರು ನೀಡಿದೆ.ಕಾಂಗ್ರೆಸ್ ಬೆಂಗಳೂರು ನಗರ ಘಟಕದಿಂದ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ.
 
ಸಚಿವ ಸೋಮಣ್ಣ ಪೊಲೀಸರ ಸಮ್ಮುಖದಲ್ಲೇ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ.ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕಿತ್ತು.ಆದರೆ ದೂರು ದಾಖಲಿಸಲು ಅಧಿಕಾರಿಗಳು,ಪೊಲೀಸರು ವಿಫಲರಾಗಿದ್ದಾರೆ.ಹೀಗಾಗಿ ಸಚಿವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಹಿಳಾ ಆಯೋಗಕ್ಕೆ ಕೈ ನಿಯೋಗದ ದೂರು ನೀಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ