ಕಾಳಿ ಮಾತೆ ಕಣ್ಣು ತೆರೆದು ನೋಡಿದ್ಲಾ?

ಶುಕ್ರವಾರ, 12 ಅಕ್ಟೋಬರ್ 2018 (15:42 IST)
ಕಣ್ಣು ತೆರೆದು ನೋಡಿದ್ಲಾ ಕಾಳಿ ಮಾತೆ? ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ದೇವಾಲಯದಲ್ಲಿ ನಡೆದಿರುವ ಅಚ್ಚರಿ ಈಗ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಜನರಲ್ಲಿ ಕುತೂಹಲ ಮೂಡಿಸುತ್ತಿದೆ. ನವರಾತ್ರಿ ಉತ್ಸವದ ವೇಳೆಯಲ್ಲಿ ‌ನಡೆದ ಅಚ್ಚರಿ ಎಂದು ಹರಿದಾಡುತ್ತಿರುವ ವೀಡಿಯೋ ಇದಾಗಿದೆ.

ಬೆಂಡೆಕೆರೆ ಗ್ರಾಮದ ಭದ್ರ ಕಾಳಮ್ಮ ದೇವಾಲಯದಲ್ಲಿ ನಡೆದಿರುವ‌ ಘಟನೆ ಎಂದು ವಿಡಿಯೋ ಹರಿಬಿಡಲಾಗಿದೆ.
ದೇವಿಯ ವಿಗ್ರಹದಲ್ಲಾಗಿರುವ ಬದಲಾವಣೆ ಕಂಡು ಅಚ್ಚರಿಗೊಂಡಿರುವ ಭಕ್ತರು, ದೇವಿ ದರ್ಶನಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರತಿ ಅಮವಾಸ್ಯೆಯೆಂದು ದೇವಿ ವಿಗ್ರಹದಲ್ಲಿ ಇಂತಹ ಬದಲಾವಣೆ ಯಾಗಿರುವ ಬಗ್ಗೆ ನಡೆಯುತ್ತಿರುವ ಚರ್ಚೆ ಗಮನ ಸೆಳೆಯುತ್ತಿದೆ.

ಈ ಸಲದ ಅಮವಾಸ್ಯೆ ದಿನ ದೇವಿ ಕಣ್ಣು ಬಿಟ್ಟಂತೆ ವಿಗ್ರಹದಲ್ಲಾದ ಬದಲಾವಣೆಯನ್ನ ವೀಡಿಯೋ ಮಾಡಿರುವ ಭಕ್ತರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕಣ್ಣು ಬಿಟ್ಟಂತೆ ಕಾಣೋ ದೇವಿಯ ವಿಸ್ಮಯಕಾರಿ ವೀಡಿಯೋ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ