ಆಯಮ್ಮನ ಎದುರಿಸೋ ಗಂಡ್ಸು ಈ ರಾಜ್ಯದಲ್ಲಿ ಇಲ್ಲವಾ: ತಾರಾ ಪ್ರಶ್ನೆ

ಶುಕ್ರವಾರ, 9 ಸೆಪ್ಟಂಬರ್ 2016 (11:12 IST)
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಸಾಥ್ ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೇರಿದ ಸಿನಿಮಾ ತಾರೆಯರು ಕಾವೇರಿ ನೀರಿನ ಬಿಡುಗಡೆ ವಿರುದ್ಧ ಪ್ರತಿಭಟಿಸಿದರು.

ಶಿವರಾಜ್ ಕುಮಾರ್ ಆಗಮಿಸಿದಾಗ ಜನರು ಜೈಕಾರ ಹಾಕಿದ್ದನ್ನು ವಿರೋಧಿಸಿದ ಶಿವರಾಜ್‌ಕುಮಾರ್ ನನಗೆ ಜೈಕಾರ ಹಾಕುವುದು ಬೇಡ, ಕಾವೇರಿ ನೀರಿನ ಸಮಸ್ಯೆ ಬಗೆಹರಿದಾಗ ಜೈಕಾರ ಹಾಕಿ, ಕಾವೇರಿ ಮಾತೆಗೆ ಜೈಕಾರ ಹಾಕಿ, ಮಹದಾಯಿ ಯೋಜನೆಗೆ ಜೈಕಾರ ಹಾಕಿ ಎಂದು ಹೇಳಿದರು.

 ವಿಧಾನಪರಿಷತ್ ಸದಸ್ಯೆ ತಾರಾ ಮಾತನಾಡಿ ನಾರಿಮನ್ ಅಂತ ವಕೀಲರು ಬಹಳ ದೊಡ್ಡ ವಕೀಲರು, ಆದರೆ ಕಾವೇರಿ ನೀರಿನ ವಿಚಾರದಲ್ಲಿ ಗೆಲ್ಲುವುದಕ್ಕೆ ಯಾಕಾಗಲಿಲ್ಲ ಎಂದು ಪ್ರಶ್ನಿಸಿದರು. ಕೋಟ್ಯಂತರ ರೂ.ಗಳನ್ನು ವಕೀಲರಿಗೆ ಕೊಡುತ್ತೀರಾ, ವಾದ ಮಾಡಕ್ಕೆ ಬರುವುದಿಲ್ಲವೇ, 10 ಸಾವಿರ ಕ್ಯುಸೆಕ್ಸ್ ನೀರನ್ನು ಕೊಡುತ್ತೇವೆಂದು ಸುಪ್ರೀಂಕೋರ್ಟ್ ಎದುರು ಹೇಗೆ ಒಪ್ಪಿಕೊಂಡರು ಎಂದು ತಾರಾ ಪ್ರಶ್ನಿಸಿದರು.

ಮೆಟ್ಟೂರು ಡ್ಯಾಂನಲ್ಲಿ 12 ಟಿಎಂಸಿ ಡ್ಯಾಂ ಸಮುದ್ರಕ್ಕೆ ಹರಿದುಹೋಗುತ್ತಿದೆ. ಆದರೆ ರಾಜಕೀಯ ಮಾಡೋದಕ್ಕೆ ಕಾವೇರಿ ನೀರು ಬೇಕಿತ್ತಾ ಎಂದು .ಆಯಮ್ಮನಎದುರಿಸುವ ಗಂಡು ರಾಜ್ಯದಲ್ಲಿ ಇಲ್ಲವಾ ಎಂದು ತಾರಾ ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ