ಕನ್ನಡ ಕಾಯಕ ವರ್ಷದ ವಿಶೇಷ ಚಟುವಟಿಕೆಗಳು

ಬುಧವಾರ, 11 ಆಗಸ್ಟ್ 2021 (22:04 IST)
ಕನ್ನಡ ಕಾಯಕ ವರ್ಷದ ವಿಶೇಷ ಚಟುವಟಿಕೆಗಳ ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಭಾಷಾಂತರ ನಿರ್ದೇಶನಾಲಯ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದೊಂದಿಗೆ ಆಗಸ್ಟ್ 13, 14 ಮತ್ತು 15 2021ರಂದು ಕನ್ನಡ ಅನುವಾದ ಕಮ್ಮಟ ಹಮ್ಮಿಕೊಳ್ಳಲಾಗಿದೆ.
 
ಆಗಸ್ಟ್ 13, 2021 ಶುಕ್ರವಾರದಂದು ಕನ್ನಡ ಭವನದ ಕನ್ನಡ ಜಗಲಿಯಲ್ಲಿ ಕನ್ನಡ ಅನುವಾದ ಕಮ್ಮಟವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಅವರು ಪ್ರಾಸ್ತವಿಕ ನುಡಿಗಳನ್ನಾಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ನಾಮನಿರ್ದೇಶಿತ ಸದಸ್ಯ ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ ಅವರು ಉಪಸ್ಥಿತರಿರಲಿದ್ದಾರೆ.
 
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ನಾಮನಿರ್ದೇಶಿತ ಸದಸ್ಯ ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಸಂಯೋಜನೆಯಲ್ಲಿ ಈ ಕಮ್ಮಟ ನಡೆಯಲಿದೆ. ಭಾಷಾಂತರ ಇಲಾಖೆಯ ನಿರ್ದೇಕ ಎಂ.ವೆಂಕಟೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ರೋಹಿತ್ ಚಕ್ರತೀರ್ಥ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಬಿ.ಸಿ. ರಾಜಕುಮಾರ್ ಅವರುಗಳು ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
 
ಈ ಕಮ್ಮಟ ಆಡಳಿತ, ನ್ಯಾಯಾಂಗ, ಶಿಕ್ಷಣ, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಈ ರೀತಿ ಸೃಜನೇತರ ಹಾಗೂ ತಾಂತ್ರಿಕ ಸಾಹಿತ್ಯದ ಅನುವಾದದ ಕುರಿತಾಗಿರುತ್ತದೆ. ಈಗಾಗಲೇ ಕನ್ನಡದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಪರಿಶ್ರಮವಿದ್ದು ಆಯಾ ಕ್ಷೇತ್ರದಲ್ಲಿ ಅನುವಾದವನ್ನು ಕೈಗೊಳ್ಳುವವರಿಗಾಗಿ ಈ ಕಮ್ಮಟ ನಡೆಯಲಿದೆ.
Photo Courtesy: Twitter

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ