ಅಯೋಧ್ಯೆಯಲ್ಲಿ ನಡೆಯಲಿರುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ ಆಯ್ಕೆ

geetha

ಶುಕ್ರವಾರ, 19 ಜನವರಿ 2024 (15:04 IST)
ಶುಭಾ ಸಂತೋಷ
ಬೆಂಗಳೂರು-ರಾಮನ ಜಾಗಕ್ಕೆ ಒಬ್ಬೊಬ್ಬರಾಗಿ ಕನ್ನಡಿಗರ ಆಗಮಿಸುತ್ತಿದ್ದಾರೆ.ಆಹ್ವಾನ ಸಿಕ್ಕ ವಿಷಯ ಕೇಳಿ ಕನ್ನಡತಿ ಶುಭಾ‌ ಸಂತೋಷಪಟ್ಟಿದ್ದಾರೆ.ರಾಮ ಮಂದಿರ ಉದ್ಘಾಟನೆ ದಿನ ಸಮರ್ಪಣ ಮನೋಭಾವದಲ್ಲಿ ಮೇಳ ನಡೆಯಲಿದೆ.ಈ ಮೇಳದಲ್ಲಿ ನಮ್ಮ ಕನ್ನಡತಿ ವೀಣೆ ನುಡಿಸಲಿದ್ದಾರೆ.ಅಯ್ಯೋಧೆಯಲ್ಲಿ‌ ಸು.22 ರಾಜ್ಯಗಳ ಶಾಸ್ತ್ರೀಯಾ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ಮೊಳಗಲಿದೆ.
 
ಶುಭಾ ಗುರುಗಳು ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರು.ಈಗಾಗಲೇ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶುಭಾ ವೀಣೆ ನುಡಿಸಿದ್ದಾರೆ.ಈಗ ರಾಮಂದಿರಲ್ಲಿ ನುಡಿಸಲು ಅವಕಾಶ ಕನ್ನಡತಿ ಗಿಟ್ಟಿಸಿಕೊಂಡಿದ್ದಾರೆ.ಸದ್ಯ "ಜಯತು ಕೋಂದಡ ರಾಮ ಜಯತು ದಶರತ ರಾಮ" ಹಾಡನು ಶುಭಾ ಸಂತೋಷ್ ಹಾಡಿದ್ದಾರೆ.ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಶುಭ ಸಂತೋಷ್ ಹೋಗುತ್ತಿದ್ದಾರೆ.ತಮ್ಮ ಗುರುಗಳಾದ ಶ್ರೀ ಶ್ರೀನಿವಾಸ ಮೂರ್ತಿ ಆಚಾರ್, ಸುಧಾವ್ಯಾದರಾಜ್ , ಹೆಚ್ ಎಅ್ ಸುಧೀದ್ರ ಅವರಿಗೆ ಶುಭಾ ಸಂತೋಷ ಧನ್ಯವಾದ ಅರ್ಪಿಸಿದ್ದಾರೆ."ತ್ಯಾಗ ರಾಜರ ಮನವ್ಯಾಳ ಇಂಚರ" ಕೃತಿಯನ್ನು  ಶುಭಾ ಸಂತೋಷ್ ನುಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ