ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ಖಂಡಿಸಿ ಕನ್ನಡ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಬಂದ್ ಸಂದರ್ಭದಲ್ಲಿ ಏನೆಲ್ಲಾ ಇರಲಿದೆ, ಯಾವುದೆಲ್ಲಾ ಇರಲ್ಲ ಇಲ್ಲಿದೆ ಡೀಟೈಲ್ಸ್.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆಕೊಟ್ಟಿರುವ ಬಂದ್ ಗೆ ಕೆಲವು ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿಲ್ಲ. ಹಾಗಿದ್ದರೂ ಕೆಲವರು ಬೆಂಬಲ ನೀಡುತ್ತಿದ್ದು ನಾಳೆ ಕರ್ನಾಟಕದಲ್ಲಿ ಸಂಚಾರಕ್ಕೆ ವ್ಯವಸ್ಥೆಯಿರುತ್ತಾ, ಅಂಗಡಿಗಳು ತೆರೆದಿರುತ್ತಾ ಎಂದೆಲ್ಲಾ ಜನರಲ್ಲಿ ಆತಂಕವಿದೆ.
ಏನೆಲ್ಲಾ ಇರಲ್ಲ?
ಓಲಾ, ಉಬರ್, ಏರ್ ಪೋರ್ಟ್ ಟ್ಯಾಕ್ಸಿ, ಖಾಸಗಿ ಆಟೋ ಸಂಘಗಳು, ಖಾಸಗಿ ಸಾರಿಗೆಗಳು ನಾಳೆ ಸೇವೆಗೆ ಲಭ್ಯವಿರಲ್ಲ. ಇವೆಲ್ಲವೂ ನಾಳೆಯ ಬಂದ್ ಗೆ ಬೆಂಬಲ ನೀಡುತ್ತಿವೆ.
ಏನೆಲ್ಲಾ ಬಂದ್?
ಚಿತ್ರರಂಗ ಬಂದ್ ಗೆ ಬೆಂಬಲ ನೀಡುತ್ತಿದ್ದು, ಸಿನಿಮಾ ಪ್ರದರ್ಶನ ಬೆಳಗಿನ ಶೋ ರದ್ದಾಗಲಿದೆ. ಚಿತ್ರೀಕರಣ ಬಂದ್ ಆಗಿರಲಿದೆ. ಖಾಸಗಿ ಶಾಲೆಗಳ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಹಾಗಿದ್ದರೂ ಶಾಲೆಗಳ ವಾಹನ ಓಡಾಟಕ್ಕೆ ಅನುಮತಿಯಿರುವುದರಿಂದ ಶಾಲೆ ನಡೆಯಬಹುದು ಎಂಬ ವಿಶ್ವಾಸವಿದೆ.
ಏನೆಲ್ಲಾ ಇರುತ್ತದೆ?
ಬೀದಿ ಬದಿ ವ್ಯಾಪಾರ, ಹೋಟೆಲ್ ಗಳು ಬಂದ್ ಗೆ ಕೇವಲ ನೈತಿಕ ಬೆಂಬಲ ನೀಡುತ್ತಿದ್ದು, ಎಂದಿನಂತೆ ವ್ಯವಹಾರ ನಡೆಸಲಿವೆ. ಇದಲ್ಲದೆ ಮೆಡಿಕಲ್, ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳು ಕಾರ್ಯನಿರ್ವಹಿಸಲಿವೆ. ಉತ್ತರ ಕರ್ನಾಟಕದಲ್ಲಿ ಆಟೋ ಕೂಡಾ ಲಭ್ಯವಿರುತ್ತದೆ.
ಈ ಜಿಲ್ಲೆಗಳಲ್ಲಿ ಬಂದ್ ಇರಲ್ಲ
ಕೋಲಾರ, ದಕ್ಷಿಣ ಕನ್ನಡ, ಹುಬ್ಬಳ್ಳಿ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲಿ ನಾಳೆ ಬಂದ್ ಯಾವುದೇ ಪರಿಣಾಮ ಬೀರಲ್ಲ. ಈ ಜಿಲ್ಲೆಗಳು ಎಂದಿನಂತೆ ನಡೆಯಲಿದೆ.