ಬೆಂಗಳೂರು ವಿಭಜನೆಯ ವಿಧೇಯಕಕ್ಕೆ ಬಿಜೆಪಿ ಆಕ್ರೋಶ

Krishnaveni K

ಬುಧವಾರ, 24 ಜುಲೈ 2024 (09:28 IST)
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಮಂಡಿಸಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಆರ್ ಅಶೋಕ್ ನಾವೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಇಲ್ಲೇ ಸಾಯುವವರು. ನಮ್ಮ ಜೊತೆಗೂ ಚರ್ಚಿಸಿ ಎಂದಿದ್ದಾರೆ.

ಪ್ರತಿಪಕ್ಷಗಳ ಗದ್ದಲ, ಆಕ್ಷೇಪದ ನಡುವೆಯೇ ನಿನ್ನೆ ವಿಧೇಯಕವನ್ನು ಮಂಡಿಸಲಾಗಿದೆ. ಆದರೆ ವಿಧೇಯಕ ಅಧ್ಯಯನಕ್ಕೆ ಸಮಯಾವಕಾಶ ಬೇಕೆಂದು ಬಿಜೆಪಿ ಕೇಳಿದೆ. ವಿಧಾನಸಭೆಯಲ್ಲಿ ಇದೀಗ ಅನುಮೋದನೆ ಪಡೆದರೂ ವಿಧಾನಪರಿಷತ್ ನಲ್ಲಿ ವಿಧೇಯಕಕ್ಕೆ ಅನುಮೋದನೆ ಸಿಗುವುದು ಕಷ್ಟವಾಗಿದೆ.

172 ಪುಟಗಳ ವಿಧೇಯಕವನ್ನು ಏಕಾಏಕಿ ಮಂಡಿಸಿ ಪಾಸ್ ಮಾಡುವುದು ಸರಿಯಲ್ಲ. ನಮಗೂ ಚರ್ಚೆಗೆ ಅವಕಾಶ ಕೊಡಬೇಕು ಎಂದು ಅಶೋಕ್ ಹೇಳಿದ್ದಾರೆ. 1 ಕೋಟಿ ಬೆಂಗಳೂರನ್ನು ಬಿಬಿಎಂಪಿಗೆ ಆಳಲು ಸಾಧ್ಯವಾಗುವುದಿಲ್ಲ ಎಂದರೆ ನಾಚಿಕೆಗೇಡು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ವಿಧೇಯಕದಲ್ಲಿರುವ ಪ್ರಮುಖ ಅಂಶಗಳೆಂದರೆ ಅಧಿಸೂಚನೆ ಬಳಿಕ ಸ್ಥಳೀಯ ಸಂಸ್ಥೆಗಳ ಅಸ್ತಿತ್ವ ರದ್ದು ಮಾಡುವುದು, ನಗರ ಪಾಲಿಕೆಗಳನ್ನು ಆರ್ಥಿಕ, ಕೃಷಿ, ಉದ್ಯೋಗ, ಮೂಲ ಸೌಕರ್ಯಗಳನ್ನು ನೋಡಿಕೊಂಡು ವಿಭಜಿಸುವುದು, 4 ದಿಕ್ಕಿನ ಗಡಿ ಗುರುತಿಗೆ ಕಲ್ಲು, 5 ವರ್ಷಕ್ಕೊಮ್ಮೆ ಮೇಯರ್ ನೇಮಕ ಇತ್ಯಾದಿಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ