ಬೆಂಗಳೂರು: ಕರ್ನಾಟಕ ಬಜೆಟ್ 2025 ರಲ್ಲಿ ಸಿಎಂ ಸಿದ್ದರಾಮಯ್ಯ ಮುಸ್ಲಿಮರ ಸ್ಮಶಾನ ಮತ್ತು ವಕ್ಫ್ ಆಸ್ತಿ ರಕ್ಷಣೆಗಾಗಿ 150 ಕೋಟಿ ರೂ. ಮೀಸಲಿಟ್ಟಿದ್ದಾರೆ.
ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ವಕ್ಫ್ ಆಸ್ತಿ ಕಬಳಿಕೆ ವಿವಾದ ತಾರಕಕ್ಕೇರಿತ್ತು. ಇದೀಗ ಕೇಂದ್ರ ಸರ್ಕಾರ ಸಂಸತ್ ನಲ್ಲಿ ವಕ್ಫ್ ಆಸ್ತಿ ತಿದ್ದುಪಡಿ ಬಿಲ್ ಮಸೂದೆ ಮಂಡಿಸಿದೆ. ಈ ವಿವಾದಗಳ ನಡುವೆ ವಕ್ಫ್ ಆಸ್ತಿ ರಕ್ಷಣೆಗಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿದೆ.
ದೇಶದಾದ್ಯಂತ ವಕ್ಫ್ ಆಸ್ತಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಸಿಎಂ ಇಂತಹದ್ದೊಂದು ಅನುದಾನ ಘೋಷಣೆ ಮಾಡಿರುವುದು ಮತ್ತೆ ಚರ್ಚೆಗೆ ಗುರಿಯಾಗಲಿದೆ. ಕೇಂದ್ರ ಸರ್ಕಾರದ ವಕ್ಫ್ ಆಸ್ತಿ ತಿದ್ದುಪಡಿ ನಿಯಮವನ್ನು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ವಿರೋಧಿಸುತ್ತಲೇ ಬಂದಿದ್ದಾರೆ.
ವಕ್ಫ್ ಮಂಡಳಿ ಮುಸ್ಲಿಮರ ವೈಯಕ್ತಿಕ ಮಂಡಳಿ. ಅದರಲ್ಲಿ ನಾವು ಕೈ ಹಾಕಲು ಹೋಗಬಾರದು ಎಂದಿದ್ದರು. ಇದೀಗ ಬಜೆಟ್ ನಲ್ಲಿ 150 ಕೋಟಿ ರೂ. ಅನುದಾನ ಘೋಷಿಸುವ ಮೂಲಕ ಬಂಪರ್ ಕೊಡುಗೆ ನೀಡಿದ್ದಾರೆ.