Karnataka Budget live: ಬಿಸಿಯೂಟ ಕಾರ್ಯಕರ್ತರಿಗೆ ಬಂಪರ್ ಗಿಫ್ಟ್ ಕೊಟ್ಟ ಸಿಎಂ ಸಿದ್ದರಾಮಯ್ಯ

Krishnaveni K

ಶುಕ್ರವಾರ, 7 ಮಾರ್ಚ್ 2025 (11:02 IST)
ಬೆಂಗಳೂರು: ಕರ್ನಾಟಕ ಬಜೆಟ್ 2025 ರನ್ನು ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಅದೇನು ಇಲ್ಲಿದೆ ವಿವರ.
 

ಬಿಸಿಯೂಟ ಕಾರ್ಯಕರ್ತರು ಕನಿಷ್ಠ ವೇತನಕ್ಕೆ ಆಗ್ರಹಿಸಿ ಇದೀಗ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಇಂದು ಬಜೆಟ್ ನಲ್ಲಿ ಬಿಸಿಯೂಟ ಕಾರ್ಯಕರ್ತರಿಗೆ ಸಿಎಂ ಬಂಪರ್ ಕೊಡುಗೆ ನೀಡಿದ್ದಾರೆ.

ರಾಜ್ಯದ ಬಿಡಿಯೂಟ ಕಾರ್ಯಕರ್ತರ ಗೌರವಧನವನ್ನು 1000 ರೂ.ಗೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮಾಸಿಕ ವೇತನ 6,000 ರೂ. ಹೆಚ್ಚಳ ಮಾಡಿ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಬಿಸಿಯೂಟ ನೌಕರರು ಪ್ರತಿಭಟನೆ ನಡೆಸುತ್ತಿದ್ದರು.

ಇದೀಗ ಸಿಎಂ ಬಜೆಟ್ ನಲ್ಲಿ 1000 ರೂ.ಗೆ ಗೌರವ ಧನ ಹೆಚ್ಚಳ ಮಾಡಿದ್ದಾರೆ. ಇಂದು ಸಿಎಂ ದಾಖಲೆಯ 16 ನೇ ಬಜೆಟ್ ಮಂಡಿಸುತ್ತಿದ್ದಾರೆ.  ರಾಹುಲ್ ಕಾಲಕ್ಕೆ ಮೊದಲೇ ಇಂದು ಬಜೆಟ್ ಭಾಷಣ ಆರಂಭಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ