ಹಲವು ವಿವಾದ, ಆಕ್ಷೇಪಗಳ ನಡುವೆಯೂ ಜಾತಿ ಗಣತಿ ಆರಂಭವಾಗಿದೆ. ಮೊದಲ ಎರಡು ದಿನ ತಾಂತ್ರಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಿದರೂ ಜಾತಿಗಣತಿ ಮುಂದುವರಿದಿದೆ. ಇಂದು ಕೋರ್ಟ್ ನಲ್ಲಿ ಜಾತಿಗಣತಿ ಬಗ್ಗೆ ಮಹತ್ವದ ತೀರ್ಪು ಹೊರಬೀಳುವ ಸಾಧ್ಯತೆಯೂ ಇದೆ.
ಈ ನಡುವೆ ಜಾತಿಗಣತಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಕಡ್ಡಾಯವಾಗಿ ಬೇಕಾಗುತ್ತದೆ ಎಂದು ಈಗಾಗಲೇ ಸರ್ಕಾರವೇ ಮಾಹಿತಿ ನೀಡಿದ. ಇದರ ನಡುವೆ ಗಣತಿ ವೇಳೆ ಒಂದಷ್ಟು ಪ್ರಶ್ನೆಗಳನ್ನು ನಿಮ್ಮ ಕುಟುಂಬ, ಆದಾಯಕ್ಕೆ ಸಂಬಂಧಿಸಿದಂತೆ ಕೇಳಲಾಗುತ್ತದೆ.
ಜಾತಿ, ಧರ್ಮ ಜೊತೆಗೆ ನಿಮ್ಮಕುಟುಂಬದ ಆದಾಯ, ಶಿಕ್ಷಣ, ಸಾಲವಿದೆಯೇ, ಉದ್ಯೋಗವೇನು, ಮಾಸಿಕ ಖರ್ಚೆಷ್ಟು, ಆದಾಯವೆಷ್ಟು, ಮತದಾನ ಮಾಡುವವರು ಎಷ್ಟು ಮಂದಿ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಜಾತಿ ಗಣತಿ ವೇಳೆ ಯಾವೆಲ್ಲಾ ಪ್ರಶ್ನೆಗಳು ಇರಬಹುದು ಇಲ್ಲಿದೆ ನೋಡಿ ವಿವರ.