ಕೇಂದ್ರ ಸರ್ಕಾರ ಮಾಡಿದ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
ಗುರುವಾರ, 26 ಡಿಸೆಂಬರ್ 2019 (13:53 IST)
ಬೆಂಗಳೂರು : ಕೇಂದ್ರ ಸರ್ಕಾರ ಮಾಡಿದ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದುಕೊಂಡಿದೆ.
ಶಿಕ್ಷಣ, ಆರೋಗ್ಯ, ಆರ್ಥಿಕ ಬೆಳವಣಿಗೆ , ಕಾನೂನು ನೆರವು, ನ್ಯಾಯಾಂಗ ಸೇವೆ ಮುಂತಾದ ಹತ್ತು ವಿಭಾಗಗಳಲ್ಲಿ 50 ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಬಂದಿದೆ.
ಈ ಬಗ್ಗೆ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಆರೋಗ್ಯ, ಆರ್ಥಿಕ ಬೆಳವಣಿಗೆ , ಕಾನೂನು ನೆರವು, ನ್ಯಾಯಾಂಗ ಸೇವೆ ಮುಂತಾದ ಹತ್ತು ವಿಭಾಗಗಳಲ್ಲಿ 50 ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಮಾಡಿದ ಉತ್ತಮ ಆಡಳಿತ ಸೂಚ್ಯಂಕ ಒಳ್ಳೆಯ ಆಡಳಿತ ನೀಡಲು ಸ್ಫೂರ್ತಿ ಮತ್ತು ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.