ಬಿಪಿಎಲ್ ಕಾರ್ಡ್ ರದ್ದು ಮಾಡುವುದರಿಂದ ಸರ್ಕಾರಕ್ಕೆ 30 ಸಾವಿರ ಕೋಟಿ ಲಾಭ

Krishnaveni K

ಗುರುವಾರ, 21 ನವೆಂಬರ್ 2024 (14:09 IST)
ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದು ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ 20 ರಿಂದ 30 ಸಾವಿರ ಕೋಟಿ ಲಾಭವಾಗುತ್ತದೆ. ಅದಕ್ಕಾಗಿಯೇ ಬಿಪಿಎಲ್ ರದ್ದು ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಪಿಎಲ್ ಕಾರ್ಡ್ ರದ್ದು ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ಸುಮಾರು 30 ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಇದನ್ನು ಇಟ್ಟುಕೊಂಡು ನಿಮ್ಮ ಶಾಸಕರನ್ನು ಸಂತೃಪ್ತಿಗೊಳಿಸಲು ಬಳಸುತ್ತೀರಿ. ಸರ್ಕಾರದ ಬಳಿಕ ಒಂದು ರೂಪಾಯಿ ಇಲ್ಲ ಈಗ. ಅದಕ್ಕೇ ಈ ರೀತಿ ಬಡವರ ಅನ್ನಕ್ಕೆ ಕೈ ಹಾಕಿದ್ದೀರಿ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಕಚೇರಿ ನವೀಕರಣಕ್ಕೆ 2 ಕೋಟಿ ರೂ. ಖರ್ಚು ಮಾಡುತ್ತಾರೆ. ಆದರೆ ಬಡವರಿಗೆ ಒಂದು ತಿಂಗಳಿಗೆ 100-150 ರೂ. ರೇಷನ್ ಕೊಡೋದು. ಅದಕ್ಕೂ ಕಲ್ಲು ಹಾಕುತ್ತೀರಿ. ನಿಮಗೆ ಮಾತ್ರ ಐಷಾರಾಮಿ ಜೀವನ ಬೇಕು. ಆದರೆ ಬಡವರಿಗೆ ಅನ್ನ ಕೊಡಲು ಯಾಕೆ ಕಲ್ಲು ಹಾಕುತ್ತೀರಿ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಇನ್ನೇನು ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಅದಕ್ಕೆ ಮೊದಲು ಬಿಪಿಎಲ್ ಕಾರ್ಡ್ ರದ್ದಾಗಿರುವವರದ್ದೆಲ್ಲಾ ಅದೇ ರೀತಿ ವಾಪಸ್ ಆಗಬೇಕು. ಮತ್ತೆ ಅವರನ್ನು ಅರ್ಜಿ ತೆಗೆದುಕೊಂಡು ಬನ್ನಿ ಎಂದು ಕಚೇರಿಗೆ ಅಲೆಯಿಸುವುದೆಲ್ಲಾ ಬೇಡ. ಯಥಾ ಪ್ರಕಾರ ಬಿಪಿಎಲ್ ಕಾರ್ಡ್ ರೇಷನ್ ಸಿಗುವಂತೆ ಮಾಡಬೇಕು. ಈ ತಿಂಗಳಿನದ್ದೂ ಸೇರಿಸಿ ರೇಷನ್ ಕೊಡಬೇಕು. ಇಲ್ಲದೇ ಹೋದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ